ನವದೆಹಲಿ, ಫೆ.10- ಹೈಕೋರ್ಟ್ ನ್ಯಾಯಾಧೀಶರ ಮೇಲಿನ ಲೈಂಗಿಕ ಕಿರುಕುಳದ ಆರೋಪದ ವಿಚಾರಣೆಯ ನಂತರ 2014 ರಲ್ಲಿ ರಾಜೀನಾಮೆ ನೀಡಿದ ಮಧ್ಯಪ್ರದೇಶದ ಮಾಜಿ ಮಹಿಳಾ ನ್ಯಾಯಾಂಗ ಅಧಿಕಾರಿಯನ್ನು ಮರುನೇಮಕಗೊಳಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಅವರ ರಾಜೀನಾಮೆಯನ್ನು ಅಂಗೀಕರಿಸಿದ ಆದೇಶವನ್ನು ರದ್ದುಗೊಳಿಸಿ ಕೂಡಲೇ ಅವರನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನಾಗಿ ಮರುನೇಮಕಗೊಳಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‍ಗೆ ನಿರ್ದೇಶನ ನೀಡಿದೆ.
ಆದರೆ, ಮಹಿಳಾ ನ್ಯಾಯಾಧೀಶರಿಗೆ ವೇತನವನ್ನು ಹಿಂತಿರುಗಿಸಲು ಅರ್ಹತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗ್ವಾಲಿಯರ್‍ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮಹಿಳಾ ಅಧಿಕಾರಿ 2014 ಜುಲೈ 15 ರಂದು ನೀಡಿದ್ದ ರಾಜೀನಾಮೆಯನ್ನು ಸ್ವಯಂಪ್ರೇರಿತ ಎಂದು ಅರ್ಥೈಸಲು ಸಾಧ್ಯವಿಲ್ಲ. ರಾಜೀನಾಮೆ ಅಂಗೀಕರಿಸಿದ 2014ರ ಜುಲೈ 17ರ ಆದೇಶವನ್ನು ಹಿಡಿದಿಡಲಾಗಿದೆ. ಅರ್ಜಿದಾರರನ್ನು ತಕ್ಷಣವೇ ಹೆಚ್ಚುವರಿ ನ್ಯಾಯಾಧೀಶರನ್ನಾಇಗ ಮರು ನೇಮಿಸಲು ಆದೇಶಿಸಲಾಗಿದೆ.
ಮಹಿಳಾ ನ್ಯಾಯಾಧೀಶರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ನ್ಯಾಯಾಂಗ ಅಧಿಕಾರಿಯನ್ನು ಬಲವಂತ ಪಡಿಸಿ ರಾಜೀನಾಮೆ ಪಡೆಯಲಾಗಿದೆ ಎಂದಿದ್ದರು. ಹೈಕೋರ್ಟಿನ ರಿಜಿಸ್ಟ್ರಾರ್ ಜನರಲ್ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ನಾಲ್ಕು ವರ್ಷಗಳ ನಂತರ ಲೈಂಗಿಕ ಕಿರುಕುಳದ ಆರೋಪ ಮಹಿಳಾ ಅಧಿಕಾರಿ, ರಾಜೀನಾಮೆ ನೀಡಲು ತಮ್ಮನ್ನು ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ. ಈ ಆರೋಪದಿಂದ ಕೆಲಸದ ಸ್ಥಳದಲ್ಲಿ ಪ್ರತಿಕೂಲ ವಾತಾವರಣ ನಿರ್ಮಾಣವಾಗಿತ್ತು. ಆರೋಪದ ಬಗ್ಗೆ ವಿಚಾರಣೆ ನಡೆಸಿದ ರಾಜ್ಯಸಭೆ ನೇಮಿಸಿದ ಸಮಿತಿ ಪ್ರತಿವಾದಿಯನ್ನು ನಿರ್ದೋಷಿ ಎಂದು ಅಭಿಪ್ರಾಯ ಪಟ್ಟಿದೆ ಎಂದು ವಾದಿಸಿದ್ದರು.
ಈ ಪ್ರಕರಣವನ್ನು ರಾಜ್ಯಸಭೆಯ 58 ಸದಸ್ಯರು ಬೆಂಬಲಿಸಿದ ನಂತರ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಮಹಾಭಿಯೋಗದ ನಿರ್ಣಯವನ್ನು ಅಂಗೀಕರಿಸಿತ್ತು. ಆಗಿನ ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿ ಆರ್ ಭಾನುಮತಿ, ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ (ಅಂದಿನ ಬಾಂಬೆ ಹೈಕೋರ್ಟ್ ನ್ಯಾಯಾಧೀಶರು), ನ್ಯಾಯಮೂರ್ತಿ ಕೆ.ಕೆ. ವೇಣುಗೋಪಾಲ್ (ಈಗ ಭಾರತದ ಅಟಾರ್ನಿ ಜನರಲ್) ಅವರನ್ನೊಳಗೊಂಡ ಸಮಿತಿಯ ವರದಿಯು ಹೈಕೋರ್ಟ್ ನ್ಯಾಯಮೂರ್ತಿಗೆ ಕ್ಲೀನ್‍ಚಿಟ್ ನೀಡಿತ್ತು ಮತ್ತು ನ್ಯಾಯಾಲಯದ ಮುಂದೆ ಮಂಡಿಸಲಾಗಿತ್ತು.
ಇದಕ್ಕೆ ಪ್ರತಿವಾದ ಮಾಡಿದ್ದ ಇಂದಿರಾ ಜೈಸಿಂಗ್ ಅವರು, ಮಹಿಳಾ ನ್ಯಾಯಾಧೀಶರ ವಿಚಾರಣಾ ಸಮಿತಿಯ ವರದಿಯಲ್ಲಿನ ವರ್ಗೀಯ ತೀರ್ಮಾನವನ್ನು ಉಚ್ಚ ನ್ಯಾಯಾಲಯ ನಿರ್ಲಕ್ಷಿಸಿದೆ. ಅಸಹನೀಯ ಸಂದರ್ಭಗಳಲ್ಲಿ ಬೇರೆ ಆಯ್ಕೆಗಳಿಲ್ಲದೆ ರಾಜೀನಾಮೆ ನೀಡಬೇಕಾಯಿತು. ಬಲವಂತವಾಗಿ ರಾಜೀನಾಮೆ ಪಡೆದಿದ್ದರಿಂದ ಅದನ್ನು ರದ್ದುಗೊಳಿಸಿ ಸೇವೆಗೆ ಮತ್ತೆ ನೇಮಿಸಬೇಕು ಎಂದು ಮನವಿ ಮಾಡಿದ್ದರು.
