ಸ್ಮಾರ್ತ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ಇಲ್ಲ: ಸುಪ್ರೀಂ ಸ್ಪಷ್ಟನೆ

Social Share

ಹೊಸದಿಲ್ಲಿ, ಅ.17- ಅದ್ವೈತ ಸಿದ್ಧಾಂತ ಪಾಲನೆ ಮಾಡುವ ಸ್ಮಾರ್ತ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.

ಸ್ಮಾರ್ತ ಬ್ರಾಹ್ಮಣರು ಧಾರ್ಮಿಕ ಪಂಗಡವಲ್ಲ, ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಅನೇಕ ಜನರು ಅದ್ವೈತ ತತ್ವವನ್ನು ಅನುಸರಿಸುತ್ತಾರೆ. ಈ ರೀತಿ ಅಲ್ಪಸಂಖ್ಯಾತ ಸ್ಥಾನಮಾನ ನೀಡುತ್ತಾ ಹೋದರೆ, ನಾವು ಅಲ್ಪಸಂಖ್ಯಾತರ ರಾಷ್ಟ್ರವನ್ನು ಹೊಂದಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

2022ರ ಜೂನ್ 7ರಂದು ತಮಿಳುನಾಡು ಹೈಕೋರ್ಟ್, ಭಾರತದ ಸಂವಿಧಾನದ 26 ನೇ ವಿಯ (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ) ಅಡಿಯಲ್ಲಿ ಸ್ಮಾರ್ತ ಬ್ರಾಹ್ಮಣರು ಅಲ್ಪಸಂಖ್ಯಾತರ ಪ್ರಯೋಜನಗಳಿಗೆ ಅರ್ಹರಲ್ಲ ಎಂದು ಹೇಳಿತ್ತು.

ಸ್ಮಾರ್ತ ಬ್ರಾಹ್ಮಣರು ಅಥವಾ ಬೇರೆ ಯಾವುದೇ ಹೆಸರಿನಿಂದ ಸಾಮಾನ್ಯ ಸಂಘಟನೆ ಹೊಂದಿಲ್ಲ. ತಮಿಳುನಾಡು ರಾಜ್ಯದ ಇತರ ಬ್ರಾಹ್ಮಣರಿಂದ ಸ್ಮಾರ್ತರನ್ನು ಪ್ರತ್ಯೇಕಿಸುವ ಯಾವುದೇ ವಿಶಿಷ್ಟತೆಗಳನ್ನು ಗುರುತಿಸಲಾಗಿಲ್ಲ. ಹಾಗಾಗಿ ಸ್ಮಾರ್ತರು ತಮ್ಮನ್ನು ತಾವು ಧಾರ್ಮಿಕ ಪಂಗಡ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ.

ಭಾರತದ ಸಂವಿಧಾನದ 26 ನೇ ವಿಯ ಅಡಿಯಲ್ಲಿ ವಿಶೇಷ ಪ್ರಯೋಜನಗಳಿಗೆ ಅರ್ಹರಲ್ಲ ಎಂದು ಕೋರ್ಟ್ ಹೇಳಿದೆ.

Articles You Might Like

Share This Article