Saturday, September 23, 2023
Homeಇದೀಗ ಬಂದ ಸುದ್ದಿಸಂಸದ ಪ್ರಜ್ವಲ್ ರೇವಣ್ಣ ಸದಸ್ಯತ್ವ ಅನರ್ಹ ಆದೇಶಕ್ಕೆ ಸುಪ್ರೀಂ ತಡೆ

ಸಂಸದ ಪ್ರಜ್ವಲ್ ರೇವಣ್ಣ ಸದಸ್ಯತ್ವ ಅನರ್ಹ ಆದೇಶಕ್ಕೆ ಸುಪ್ರೀಂ ತಡೆ

- Advertisement -

ನವದೆಹಲಿ, ಸೆ.19- ಚುನಾವಣಾ ಆಯೋಗಕ್ಕೆ ಸುಳ್ಳು ಆದಾಯ ಪ್ರಮಾಣಪತ್ರ ಸಲ್ಲಿಸಿರುವ ಆರೋಪದ ಮೇರೆಗೆ ಹಾಸನ ಲೋಕಸಭೆ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಿ ರಾಜ್ಯ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ತಡೆಯಾಜ್ಞೆನೀಡಿದೆ. ಆದರೆ ಪ್ರಜ್ವಲ್ ಅವರು ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಬಹುದಾದರೂ ಸಂಸದರಾಗಿ ಮತ ಚಲಾಯಿಸಲು ಮತ್ತು ಯಾವುದೇ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದು ಪೀಠ ಹೇಳಿದೆ.

ಮುಂದಿನ ನಾಲ್ಕು ವಾರಗಳ ಅವಗೆ ಈ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ಕೆ.ಕೆ.ವೇಣುಗೋಪಾಲ್ ಅವರ ವಾದವನ್ನು ಆಲಿಸಿದ ನಂತರ ನ್ಯಾಯಾಲಯವು ತನ್ನ ಆದೇಶವನ್ನು ನೀಡಿದೆ.

- Advertisement -

2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಕೇಳಿ ಬಂದಿತ್ತು. ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿ ಚುನಾವಣೆಯಲ್ಲಿ ಸ್ರ್ಪಧಿಸಿ ಪರಾಜಯಗೊಂಡಿದ್ದ ಅಂದಿನ ಬಿಜೆಪಿಯ ಎ.ಮಂಜು ಹಾಗೂ ಪಕ್ಷೇತರ ಅಭ್ಯರ್ಥಿ ದೇವರಾಜೇಗೌಡ ಎಂಬುವವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

BIG NEWS; 5 ದಿನದಲ್ಲಿ ಭಾರತ ತೊರೆಯುವಂತೆ ಕೆನಡ ರಾಜತಾಂತ್ರಿಕರಿಗೆ ಸೂಚನೆ

ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು ಅಂಕಿ-ಅಂಶಗಳಿಂದ ಕೂಡಿದೆ ಎಂದು ದೂರುದಾರರು ಗಂಭೀರ ಆರೋಪ ಮಾಡಿದ್ದರು. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠವು ಸೆ.1ರಂದು ಸಂಸತ್ ಸದಸ್ಯತ್ವದಿಂದ ಪ್ರಜ್ವಲ್ ರೇವಣ್ಣರನ್ನು ಅನರ್ಹಗೊಳಿಸಿ ತೀರ್ಪು ನೀಡಿತ್ತು.

ಚುನಾವಣಾ ಅರ್ಜಿದಾರರ ಪರ ಹಿರಿಯ ವಕೀಲರಾದ ಪ್ರಮೀಳಾ ನೇಸರ್ಗಿ ಹಾಗೂ ವಕೀಲ ಬಾಲಾಜಿ ಶ್ರೀನಿವಾಸನ್ ವಾದ ಮಂಡಿಸಿದರು. ನಿಯಮಗಳು ಮತ್ತು ಕಾರ್ಯವಿಧಾನಗಳ ವಿರುದ್ಧ ತನ್ನ ನಿರ್ಧಾರಕ್ಕೆ ಬರಲು ಇತರ ಕಾರಣಗಳ ನಡುವೆ ಹೈಕೋರ್ಟ್ ತನ್ನ ವಿರುದ್ಧ ಸಲ್ಲಿಸಲಾದ ಎರಡು ಪ್ರತ್ಯೇಕ ಚುನಾವಣಾ ಅರ್ಜಿಗಳನ್ನು ಕ್ರೋಢೀಕರಿಸಿದೆ ಎಂದು ಪ್ರಜ್ವಲ್ ತನ್ನ ಮನವಿಯಲ್ಲಿ ಪ್ರತಿಪಾದಿಸಿದ್ದರು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪ್ರಜ್ವಲ್ ಅವರ ಚುನಾವಣಾ ಅಫಿಡವಿಟ್‍ನಲ್ಲಿ ಅವರ ಆಸ್ತಿ ಸೇರಿದಂತೆ ಸಂಪೂರ್ಣ ಅಗತ್ಯವಿರುವ ವಿವರಗಳನ್ನು ಬಹಿರಂಗಪಡಿಸದ ಕಾರಣ 2019ರ ಚುನಾವಣೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಹೈಕೋರ್ಟ್ ಘೋಷಿಸಿತು. ನ್ಯಾಯಮೂರ್ತಿ ಕೆ.ನಟರಾಜನ್ ಅವರು ಅಂದಿನ ಬಿಜೆಪಿ ಅಭ್ಯರ್ಥಿ ಮತ್ತು ಈಗ ಜೆಡಿಎಸ್ ಶಾಸಕ ಎ.ಮಂಜು ಮತ್ತು ಇನ್ನೊಬ್ಬರು ಸಲ್ಲಿಸಿದ್ದ ಚುನಾವಣಾ ಅರ್ಜಿಗಳ ಮೇಲೆ ತೀರ್ಪು ನೀಡಿದ್ದರು.

ಕೊರೊನಾ ನಿಯಮ ಉಲ್ಲಂಸಿದ್ದ ಭಾರತೀಯನಿಗೆ ಜೈಲು ಶಿಕ್ಷೆ

2019ರ ಮೇ 23ರಂದು ಪ್ರಜ್ವಲ್ 6,76,606 ಮತಗಳನ್ನು ಗಳಿಸಿ ವಿಜಯಿ ಎಂದು ಘೋಷಿಸಲಾಯಿತು. ಪ್ರತಿಸ್ರ್ಪಧಿ ಬಿಜೆಪಿ ಅಭ್ಯರ್ಥಿಯಾಗಿ ಸ್ರ್ಪಧಿಸಿದ್ದ ಎ. ಮಂಜು 5,35,282 ಮತಗಳನ್ನು ಪಡೆದು ಪರಾಜಿತರಾಗಿದ್ದರು.

SupremeCourt, #grants, #interim, #relief, #JDSMP, #PrajwalRevanna,

- Advertisement -
RELATED ARTICLES
- Advertisment -

Most Popular