ಸುಪ್ರೀಂಕೋರ್ಟ್ ಕಲಾಪಗಳ ನೇರ ಪ್ರಸಾರ

Social Share

ನವದೆಹಲಿ,ಸೆ.27- ಸುಪ್ರೀಂಕೋರ್ಟ್ ಇದೇ ಮೊದಲ ಬಾರಿಗೆ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ನೇರ ಪ್ರಸಾರ ಮಾಡಿದ್ದು, ವಚ್ರ್ಯುವಲ್ ಮಾದರಿಯಲ್ಲಿ ವಾದ-ಪ್ರತಿವಾದಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದೆ. ಹಲವು ಮಹತ್ವದ ಪ್ರಕರಣಗಳು ಇಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೊಳಪಟ್ಟಿವೆ.

ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ಪೀಠ, ಆರ್ಥಿಕವಾಗಿ ದುರ್ಬಲವಾದ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ನೀಡುವ ಇಡಬ್ಲ್ಯುಎಸ್ ಕೋಟಾದ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದೆ.

ಸಂವಿಧಾನದ 103ನೇ ತಿದ್ದುಪಡಿ ಮೂಲಕ ಇಡಬ್ಲ್ಯುಎಸ್ ಜಾರಿಗೆ ತಂದಿರುವುದು ನಿಯಮ ಬಾಹಿರ ಎಂದು ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ನ್ಯಾಯಮೂರ್ತಿ ಬಿ.ವೈ.ಚಂದ್ರಚೂಡ್ ಅವರ ಪೀಠ ಶಿವಸೇನೆಯ ಬಣ ಹಕ್ಕು ಸ್ವಾಮ್ಯತೆ ಪ್ರಕರಣವನ್ನು ವಿಚಾರಣೆಗೊಳಪಡಿಸಿದೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉದ್ದವ್ ಠಾಕ್ರೆ ಬಣ ಶಿವಸೇನೆ ತಮ್ಮದು ಎಂದು ಪ್ರತಿಪಾದಿಸಿವೆ. ಈ ಕುರಿತು ತಕರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಎಸ್.ಕೆ.ಕೌಲ್ ಅವರನ್ನೊಳಗೊಂಡ ಮತ್ತೊಂದು ಪೀಠ ಅಖಿಲ ಭಾರತೀಯ ವಕೀಲರ ಪರಿಷತ್‍ನ ಪರೀಕ್ಷೆಯ ಮಾನ್ಯತೆ ಕುರಿತ ಪ್ರಕರಣವನ್ನು ವಿಚಾರಣೆಗೊಳಪಡಿಸಿದೆ.

2018ರ ಸೆ.27ರಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರ ಅವರ ಪೀಠ ಮಹತ್ವದ ತೀರ್ಪು ನೀಡಿ ನ್ಯಾಯಾಲಯದ ಕಲಾಪವನ್ನು ನೇರ ಪ್ರಸಾರ ಮಾಡಲು ಸಹಮತಿಸಿತ್ತು. ಈ ಮೊದಲು ಎಂ.ವಿ.ರಮಣ ಅವರನ್ನೊಳಗೊಂಡ ನೇತೃತ್ವದ ಪೀಠ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಸೆ.20ರಂದು ಯುಯು ಲಲಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂದಿನಿಂದ ಕಲಾಪದ ನೇರ ಪ್ರಸಾರ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು.

ನೇರ ಪ್ರಸಾರ ಅಸಲಿ ಕಲಾಪಕ್ಕಿಂತ 30 ಸೆಕೆಂಡ್‍ಗಳ ವಿಳಂಬವಾಗಿ ಲಭ್ಯವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.

Articles You Might Like

Share This Article