ನವದೆಹಲಿ,ಫೆ.21- ಸಿಬಿಎಸ್ಇ ಮತ್ತು ಇತರ ಮಂಡಳಿಗಳು ಈ ವರ್ಷ ನಡೆಸುವ 10 ಮತ್ತು 12ನೇ ತರಗತಿಗಳ ಆಫ್ಲೈನ್ ಭೌತಿಕ ಪರೀಕ್ಷೆಗಳನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ವಿಚಾರಣೆಗೆ ಬರುವ ವಿಷಯಗಳ ಪಟ್ಟಿಗೆ ಸೇರಿಸುವುದಾಗಿ ಸುಪ್ರೀಂಕೋರ್ಟ್ ಇಂದು ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಕೋವಿಡ್ ಸಾಂಕ್ರಾಮಿಕದ ಸನ್ನಿವೇಶ ಪರಿಗಣಿಸಿ ಭೌತಿಕ ಪರೀಕ್ಷೆಯನ್ನು ನಡೆಸಬಾರದುಉ ಎಮದು ವಕೀಲ ಪ್ರಶಾಂತ್ ಪದ್ಮನಾಭನ್ ಅವರು ಮಾಡಿದ ಮನವಿಯನ್ನು ಗಮನಕ್ಕೆ ತೆಗೆದುಕೊಂಡಿತು.
ವಿಷಯವನ್ನು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರ ನ್ಯಾಯಪೀಠದ ಮುಂದೆ ಕಳುಹಿಸಲಾಗುವುದು ಎಂದು ನ್ಯಾಯಪೀಠವು ತಿಳಿಸಿತು.
