ಮೆಡಿಕಲ್ ಸೀಟು ಹಂಚಿಕೆಯಲ್ಲಿ ಒಬಿಸಿ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ

Social Share

ನವದೆಹಲಿ, ಜ.20- ಪ್ರಸಕ್ತ ಸಾಲಿನ ವೈದ್ಯಕೀಯ ಶಿಕ್ಷಣ ಪ್ರವೇಶದ ವೇಳೆ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಶೇ.10ರಷ್ಟು ಮೀಸಲಾತಿ ಪಾಲನೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.ರಾಜ್ಯ ಸರ್ಕಾರಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರನ್ನೊಳಗೊಂಡ, ಜನವರಿ 7ರಂದು ನೀಡಲಾದ ಆದೇಶವನ್ನು ಎತ್ತಿ ಹಿಡಿದಿದೆ.
2021-22ರ ಎನ್‍ಇಇಟಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಯನ್ನು ಅನುಮತಿಸುವ ಕೇಂದ್ರ ಸರ್ಕಾರದ ನಿರ್ಧಾರ ಸಾಂವಿಧಾನ ಬದ್ಧವಾಗಿದೆ ಎಂದು ಅಕೃತ ಮುದ್ರೆ ಒತ್ತಿದೆ.
ಹೆಚ್ಚಿನ ಅಂಕಗಳು ಅರ್ಹತೆಯ ಏಕೈಕ ಮಾನದಂಡವಲ್ಲ . ಜೇಷ್ಠತೆ ಪರಿಗಣನೆಯ ವೇಳೆ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಸಂದರ್ಭೋಚಿತವಾಗಿ ಗಣನೆಗೆ ತೆಗೆದುಕೊಳ್ಳಬೇಕು. ದುಳಿದಿರುವಿಕೆಯನ್ನು ನಿವಾರಿಸುವಲ್ಲಿ ಮೀಸಲಾತಿಯ ಪಾತ್ರವನ್ನು ನಿರಾಕರಿಸಲಾಗುವುದಿಲ್ಲ. ಮೀಸಲಾತಿಯು ಅರ್ಹತೆಗೆ ವಿರುದ್ಧವಾಗಿಲ್ಲ, ಬದಲಾಗಿ ಸಾಮಾಜಿಕ ನ್ಯಾಯದ ಪರಿಣಾಮಗಳನ್ನು ಹೆಚ್ಚಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ಎಂಟು ಲಕ್ಷ ವಾರ್ಷಿಕ ಆದಾಯ ಹೊಂದಿರುವವ ಆರ್ಥಿಕ ದುರ್ಬಲ ವರ್ಗದವರು ಈ ಬಾರಿ ಎನ್‍ಇಇಟಿ-ಸ್ನಾತಕೋತ್ತರ ಪ್ರವೇಶಕ್ಕೆ ಮೀಸಲಾತಿಯಡಿ ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ.ವೈದ್ಯಕೀಯ ಶಿಕ್ಷಣ ಕೋರ್ಸ್‍ನ ಪ್ರವೇಶದ ಈ ಹಂತದಲ್ಲಿ ನ್ಯಾಯಾಂಗದ ಹಸ್ತಕ್ಷೇಪವು ಪ್ರವೇಶಾತಿಯನ್ನು ವಿಳಂಬಗೊಳಿಸುತ್ತದೆ.
ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯದಲ್ಲಿರುವ ಸಂದರ್ಭದಲ್ಲಿ ನ್ಯಾಯಾಲಯದ ವೈದ್ಯಕೀಯ ಕೋರ್ಸ್‍ಗೆ ತಡೆ ನೀಡಿದರೆ, ವೈದ್ಯರ ಕೊರತೆಯಾಗಲಿದೆ, ಕೋವಿಡ್ ಹೆದರಿಸಲು ಇದರಿಂದ ಹಿನ್ನೆಡೆಯಾಗಲಿದೆ. ಆದ್ದರಿಂದ 2021-22 ಸಾಲಿನ ಮೀಸಲಾತಿ ಮಾನದಂಡಗಳ ಕುರಿತು ಯಾವುದೇ ತಡೆ ನೀಡುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸದೆ ಮತ್ತು ಬಡವರು ಹಾಗೂ ಕಡುಬಡವರ ಮೀಸಲಾತಿ ನಿರ್ಧರಣೆಯ ಪುರಾವೆಗಳನ್ನು ಪರಿಗಣಿಸದೆ ಶೈಕ್ಷಣಿಕ ಮೀಸಲಾತಿ ಅರ್ಹತೆ ಕುರಿತು ಏಕಾಏಕಿ ತೀರ್ಪು ಪ್ರಕಟಿಸಲು ಸಾಧ್ಯವಿಲ್ಲ ಎಂದು ನ್ಯಾಯಾ ಪೀಠ ಹೇಳಿದೆ.
ಸಂವಿಧಾನದ ಕಲಂ 15 (ಎ), 15 (5) ವಸ್ತು ನಿಷ್ಠ ಸಮಾನತೆಗೆ ಕರೆ ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು ವ್ಯಕ್ತಿಗಳ ಶ್ರೇಷ್ಠತೆ ಮತ್ತು ಸಾಮಾಥ್ರ್ಯಗಳನ್ನು ಪ್ರತಿಬಿಂಬಿಸುವುದಿಲ್ಲ. ಕೆಲ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಅನೂಕಲಗಳನ್ನು ಪ್ರತಿಫಲಿಸುತ್ತದೆ.ಪರೀಕ್ಷೆ ಮುಗಿಯುವವರೆಗೆ ಮೀಸಲಾತಿ ಮತ್ತು ಸೀಟುಗಳ ಸಂಖ್ಯೆಯನ್ನು ಬಹಿರಂಗಪಡಿಸದ ಕಾರಣ, ಸೀಟುಗಳ ಸಂಖ್ಯೆ ಬದಲಾಯಿಸಲಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಆರ್ಥಿಕ ಹಿಂದುಳಿಯುವಿಕೆ ಮೀಸಲಾತಿ ಮತ್ತು ಅರ್ಹತಾ ಸ್ಥಿತಿಯ ಸಿಂಧುತ್ವ ಸುಪ್ರೀಂ ಕೋರ್ಟ್ ವಿಷಯವನ್ನು ಮಾರ್ಚ್ ಮೂರನೇ ವಾರದಲ್ಲಿ ವಿಚಾರಣೆ ನಡೆಸುವವರೆಗೂ ಅಸ್ತಿತ್ವದಲ್ಲಿರಲಿದೆ. 2021-22ನೆ ಸಾಲಿನಲ್ಲಿ ಎನ್‍ಇಇಟಿ ಪ್ರವೇಶಕ್ಕೆ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಸೀಟುಗಳನ್ನು ಮೀಸಲಿಡಲು ಜನವರಿ 7ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಈ ತೀರ್ಪನ್ನು ಕೇಂದ್ರ ಸರ್ಕಾರದ ಅಖಿಲ ಭಾರತ ವೈದ್ಯಕೀಯ ಸೀಟುಗಳ ಹಂಚಿಕೆಯ ಖೋಟಾದ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯ ಮೆಡಿಕಲ್ ಕಾಲೇಜುಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು.ಇಂದು ವಿವರವಾದ ತೀರ್ಪನ್ನು ಪ್ರಕಟಿಸಲಾಗಿದ್ದು, ಮೀಸಲಾತಿಯನ್ನು ಎತ್ತಿ ಹಿಡಿಯುವ ಜೊತೆಗೆ ರಾಜ್ಯ ಸರ್ಕಾರಗಳು ನಡೆಸುವ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಹಂಚಿಕೆಗಾಗಿ ರೂಪಿಸಲಾದ ವ್ಯವಸ್ಥೆಯನ್ನು ಬೆಂಬಲಿಸಿದೆ.
ಕೇಂದ್ರ ಸರ್ಕಾರ ಸೀಟು ಹಂಚಿಕೆಗೂ ಮುನ್ನಾ ಮತ್ತೊಮ್ಮೆ ಈ ನ್ಯಾಯಾಲಯದ ಆದೇಶವನ್ನು ಕಾಯಬೇಕಿಲ್ಲ. ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸಾಂವಿಧಾನಾತ್ಮಕವಾಗಿ ಸರಿ ಇದೆ. ಅದನ್ನೆ ಮುಂದುವರೆಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

Articles You Might Like

Share This Article