ಮಹಾರಾಷ್ಟ್ರ ಶಾಸಕರ ಅಮಾನತು ಅಸಾಂವಿಧಾನಿಕ : ಸುಪ್ರೀಂ

Social Share

ನವದೆಹಲಿ,ಜ.28- ಮಹಾರಾಷ್ಟ್ರ ವಿಧಾನಸಭೆಯಿಂದ 12 ಬಿಜೆಪಿ ಸದಸ್ಯರನ್ನು ಅಧಿವೇಶನದ ಅವಧಿಯಾಚೆಗೂ ಅಮಾನತು ಮಾಡಿರುವುದು ಅಸಾಂವಿಧಾನಿಕ ಮತ್ತು ತರ್ಕಹೀನ ನಿರ್ಣಯವಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ.
ಪೀಠಾಧಿಕಾರಿಯೊಂದಿಗೆ ದುರ್ವರ್ತನೆ ತೋರಿದ ಆರೋಪದ ಮೇರೆಗೆ 12 ಬಿಜೆಪಿ ಶಾಸಕರನ್ನು ಸದನದಿಂದ ಒಂದು ವರ್ಷ ಅಮಾನತು ಮಾಡಲಾಗಿತ್ತು. ಈ ನಿರ್ಣಯವನ್ನು ಪ್ರಶ್ನಿಸಿ ಈ ಶಾಸಕರು ಸುಪ್ರೀಂಕೋರ್ಟ್‍ನ ಮೆಟ್ಟಿಲೇರಿದ್ದರು.
ಸಂಜಯ್‍ಕೂಟೆ, ಆಶಿಷ್ ಶೇಲರ್, ಅಭಿಮನ್ಯುಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಳ್ಕರ್, ಪರಾಗ್ ಅಲವನಿ, ಹರೀಶ್ ಪಿಂಪಾಲೆ, ಯೋಗೇಶ್ ಸಾಗರ್, ಜೈಕುಮಾರ್ ರಾವತ್, ನಾರಾಯಣ್ ಕುಛೆ, ದಾಮ್ ಸತ್ಪುತೆ ಮತ್ತು ಬಂಟಿ ಭಾಂಗ್ಡಿಯಾ ಅಮಾನತುಗೊಂಡ ಶಾಸಕರು. ಇವರನ್ನು ಕಳೆದ ವರ್ಷ ಜುಲೈ 5ರಂದು ಸದನದಿಂದ ಒಂದು ವರ್ಷ ಕಾಲ ಅಮಾನತು ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು.

Articles You Might Like

Share This Article