ನೇಮಕ ಮಾಡದಿದ್ದರೆ ಆಕಾಶ ಕಳಚಿಬೀಳುತ್ತಿತ್ತೇ: ಸುಪ್ರೀಂ ಗರಂ

Social Share

ನವದೆಹಲಿ,ನ.24- ಕೇಂದ್ರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಅನುಸರಿಸಿದ ಕ್ರಮಕ್ಕೆ ಮತ್ತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅಷ್ಟು ಆತುರವಾಗಿ ನೇಮಕ ಮಾಡಿದಿದ್ದರೆ ಆಕಾಶ ಕಳಚಿ ಬೀಳುತಿತ್ತೇ ಎಂದು ಪ್ರಶ್ನೆ ಮಾಡಿದೆ.

ಆಯುಕ್ತರನ್ನು ನೇಮಕ ಮಾಡುವ ಸಂದರ್ಭದಲ್ಲಿ ಅನುಸರಿಸಿದ ನೀತಿ ನಿಯಮಗಳು ಬೆಳಕಿನ ವೇಗಕ್ಕಿಂತಲೂ ಶರವೇಗದಲ್ಲಿ ನಡೆದಿದೆ. ಇಷ್ಟು ಆತುರವಾಗಿ ದಾಖಲಾತಿಗಳನ್ನು ಪರಿಶೀಲಿಸಿ ನೇಮಕ ಮಾಡುವ ಧಾವಂತವಾದರೂ ಏನಿತ್ತು? ಸ್ವಲ್ಪ ವಿಳಂಬ ಮಾಡಿದ್ದರೆ ಆಕಾಶವೇನು ಕಳೆಚಿ ಬೀಳುತ್ತಿತ್ತೇ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ಚುನಾವಣಾ ಆಯುಕ್ತ ಅರುಣ್ ಗೋಯಲ್ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 24 ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಪ್ರಕ್ರಿಯೆಗಳನ್ನು ಮುಗಿಸಿದೆ. ದಾಖಲೆಗಳನ್ನು ಹೇಗೆ ಪರಿಶೀಲನೆ ನಡೆಸಲಾಗಿದೆ, ಮೌಲ್ಯಮಾಪನ ಹೇಗೆ ನಡೆದಿದೆ?

ನಾವು ಅವರ ಯೋಗ್ಯತೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ನೇಮಕಾತಿ ಪ್ರಕ್ರಿಯೆ ಮಿಂಚಿನ ವೇಗದಲ್ಲಿ ನಡೆದಿರುವುದನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ರುಷಿಕೇಶ್ ಬಾಯ್ ಮತ್ತು ಸಿ.ಟಿ.ರವಿಕುಮಾರ್ ನೇತೃತ್ವದ ಪಂಚಪೀಠ ಸುಪ್ರೀಂಕೋರ್ಟ್‍ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದೆ.

ಇದು ಯಾವ ರೀತಿಯ ಮೌಲ್ಯಮಾಪನ ಆದಾಗ್ಯೂ, ನಾವು ಅರುಣ್ ಗೋಯೆಲ್ ಅವರ ರುಜುವಾತುಗಳ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ, ಅವರ ನೇಮಕಾತಿಯ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾೀಶರ ಸಂವಿಧಾನ ಪೀಠ ಪ್ರಶ್ನಿಸಿತು.

ಬೆಳಗಾವಿ ಅಧಿವೇಶನಕ್ಕೆ ಅಧಿಕಾರಿಗಳ ಪೂರ್ವಭಾವಿ ಸಭೆ

ಗೋಯೆಲ್ ಅವರ ನೇಮಕಕ್ಕೆ ಸಂಬಂಧಿಸಿದ ಕಡತವನ್ನು ಮಿಂಚಿನ ವೇಗ ದಲ್ಲಿ ತೆರವುಗೊಳಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅದಕ್ಕೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು, ದಯವಿಟ್ಟು ಸ್ವಲ್ಪ ಸಮಯ ಬಾಯಿ ಮುಚ್ಚಿಕೊಂಡಿರಿ, ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ನಾನು ಕೇಳಿಕೊಳ್ಳುತ್ತಿದ್ದೇನೆ ಎಂದರು.

ಕೇಂದ್ರ ಚುನಾವಣಾ ಆಯೋಗಕ್ಕೆ ಹೊಸ ಆಯುಕ್ತರ ನೇಮಕ ವಿಚಾರವಾಗಿ ಸತತ ಮೂರನೇ ದಿನದ ವಿಚಾರಣೆಯಲ್ಲಿಯೂ ಕೆಲ ತೀಕ್ಷ್ಣ ಟೀಕೆಗಳನ್ನು ಮುಂದುವರೆಸಿದ ಸುಪ್ರೀಂ ಕೋರ್ಟ್‍ನ ಐವರು ನ್ಯಾಯಾೀಧಿಶರ ಸಂವಿಧಾನ ಪೀಠ, ತಾನು ಕೇಳಿದ ಅರುಣ್ ಗೋಯೆಲ್ ಅವರಿಗೆ ಸಂಬಂಧಿಸಿದ ಕಡತವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡಿತು.

ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ತುಂಬಾ ವೇಗವಾಗಿ ಚುನಾವಣಾ ಆಯುಕ್ತರನ್ನಾಗಿ ನೇಮಿಸುವಲ್ಲಿ ಆಕಾಶ ಕಳಚಿ ಬೀಳುವಂಥ ಧಾವಂತ ಕೇಂದ್ರ ಸರ್ಕಾರಕ್ಕೆ ಏನಿತ್ತು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿತು. ಈ ಮಧ್ಯೆ ಸರ್ಕಾರದ ಪರ ವಕೀಲರು, ವಿಷಯವನ್ನು ಸಮಗ್ರತೆಯಲ್ಲಿ ಪರಿಶೀಲಿಸಿ ಎಂದು ಮನವಿ ಮಾಡಿದರು.

ಡಿಜಿಟಲ್ ಮಾಧ್ಯಮಕ್ಕೆ ಬೀಳಲಿದೆ ಕಡಿವಾಣ

ಸತತ ಮೂರನೇ ದಿನದ ಪ್ರಕ್ರಿಯೆಯಲ್ಲಿಯೂ ಕೆಲ ತೀಕ್ಷ್ಣ ಟೀಕೆಗಳನ್ನು ಮುಂದುವರೆಸಿದ ಐವರು ನ್ಯಾಯಾೀಧಿಶರ ಸಂವಿಧಾನ ಪೀಠ, ತಾನು ಕೇಳಿದ ಅರುಣ್ ಗೋಯೆಲ್ ಅವರಿಗೆ ಸಂಬಂಧಿಸಿದ ಫೈಲ್‍ಅನ್ನು ಕೈಗೆತ್ತಿಕೊಂಡಿತು.
ಆಯುಕ್ತರನ್ನು ಹೇಗೆ ನೇಮಕ ಮಾಡಲಾಗುತ್ತದೆ ಎಂಬುದನ್ನು ವಿಚಾರಣೆ ನಡೆಸುವ ಪ್ರಕ್ರಿಯೆಗೆ ಕೇಂದ್ರ ವಿರೋಧ ವ್ಯಕ್ತಪಡಿಸಿದ್ದರ ಮಧ್ಯೆಯೂ ಕೋರ್ಟ್ ಇಂಥದ್ದೊಂದು ಪ್ರಕ್ರಿಯೆಗೆ ಮುಂದಾಯಿತು.

ಕಾನೂನು ಸಚಿವರು ಶಾರ್ಟ್‍ಲಿಸ್ಟ್ ಮಾಡಿದ ನಾಲ್ಕು ಹೆಸರುಗಳ ಪಟ್ಟಿಯಿಂದ ಹೆಸರುಗಳನ್ನು ಆಯ್ಕೆ ಮಾಡುತ್ತಾರೆ. ನವೆಂಬರ್ 18 ರಂದು ಕಡತ ಇಡಲಾಗಿದೆ. ಫೈಲ್ ಅದೇ ದಿನ ಚಲಿಸಿದೆ. ಪ್ರಧಾನಿ ಕೂಡ ಅದೇ ದಿನ ಹೆಸರನ್ನು ಶಿಫಾರಸು ಮಾಡಿದ್ದರೆ. ನಾವು ಇದರಲ್ಲಿ ಯಾವುದೇ ಚರ್ಚೆ ಬಯಸುವುದಿಲ್ಲ. ಆದರೆ ಇದನ್ನು ಯಾವುದಾದರೂ ತರಾತುರಿಯಲ್ಲಿ ಮಾಡಲಾಗಿದೆಯೇ? ಆಕಾಶ ಕಳಚಿ ಬೀಳುವಂಥ ಆತುರವೇನಿತ್ತು? ಎಂದು ನ್ಯಾಯಾಲಯ ಇಂದು ಕೇಳಿದೆ.

ಇಡೀ ಪ್ರಕ್ರಿಯೆಯು ಒಂದೇ ದಿನ ಆರಂಭವಾಗಿ ಅದೇ ದಿನ ಕೊನೆಗೊಂಡಿದ್ದನ್ನು ಗಮನಿಸಿದ ನ್ಯಾಯಪೀಠ, 24 ಗಂಟೆಗಿಂತಲೂ ಕಡಿಮೆ ಅವಯಲ್ಲಿ ಪ್ರಕ್ರಿಯೆಯನ್ನು ನೋಟಿಫೈ ಮಾಡಲಾಗಿದೆ ಮತ್ತು ಪೂರ್ಣಗೊಳಿಸಲಾಗಿದೆ.

ಹುಡುಕಿಕೊಂಡು ಬಂದು ಮನೆ ಮೇಲೆ ದಾಳಿ ಮಾಡಿದ ಆನೆ

ಯಾವ ರೀತಿಯ ಮೌಲ್ಯಮಾಪನ ಇಲ್ಲಿ ಮಾಡಲಾಗಿದೆ. ಆದಾಗ್ಯೂ ನಾವು ಅರುಣ್ ಗೋಯೆಲ್ ಅವರ ಯೋಗ್ಯತೆಯನ್ನು ಪ್ರಶ್ನಿಸುತ್ತಿಲ್ಲ. ಆದರೆ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿತು.ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪ್ರತಿಕ್ರಿಯಿಸಿ, ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸುವಂತೆ ಕೋರುತ್ತೇನೆ ಎಂದರು.

Supreme Court, questions, appointment, process, Election Commissioner, Arun Goel,

Articles You Might Like

Share This Article