ನವದೆಹಲಿ,ಆ.26-ರಾಜ್ಯದ ಮೂರು ಜಿಲ್ಲೆಗಳಲ್ಲಿ ಗಣಿ ಅದಿರು ಉತ್ಪಾದನೆಯ ಪ್ರಮಾಣದ ಮಿತಿಯನ್ನು ಸುಪ್ರೀಂಕೋರ್ಟ್ ಹೆಚ್ಚಿಸಿದೆ. ಮುಖ್ಯ ನ್ಯಾಯಮೂರ್ತಿ ಎಂ.ವಿ.ರಮಣ ಅವರ ಸೇವಾ ಅವಯ ಕೊನೆಯ ದಿನವಾದ ಇಂದು ನಡೆದ ವಿಚಾರಣೆಯಲ್ಲಿ ಕರ್ನಾಟಕದ ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ಮಿತಿಮೀರಿ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಅತಿಯಾದ ಗಣಿಗಾರಿಕೆಯಿಂದ ಎದುರಾಗಬಹುದಾದ ಸಮಸ್ಯೆಯನ್ನು ನಿಭಾಯಿಸಲು ಮತ್ತು ಸಂತ್ರಸ್ತರಿಗೆ ಸ್ಪಂದಿಸಲು ಸಿಇಎಸ್ ಶಿಫಾರಸ್ಸುಗಳನ್ನು ಪರಿಗಣಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಗಣಿಗಾರಿಕೆಗೆ ನಿಗದಪಡಿಸಲಾಗಿರುವ ವಾರ್ಷಿಕ ಮಿತಿಯನ್ನು ತೆಗೆದು ಹಾಕುವಂತೆ ಉದ್ಯಮಗಳು ಮತ್ತು ಸರ್ಕಾರದ ಪರ ಮನವಿಯನ್ನು ತಳ್ಳಿ ಹಾಕಿರುವ ಸುಪ್ರೀಂಕೋರ್ಟ್ ಮಿತಿಯನ್ನು ಹೇರಿಕೆ ಮಾಡಿದೆ.
ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವಾರ್ಷಿಕ 7 ಮಿಲಿಯನ್ ಮೆಟ್ರಿಕ್‍ಟನ್(ಎಂಎಂಟಿ)ನ್ನು 15 ಎಂಎಂಟಿಗೆ ಹೆಚ್ಚಿಸಿದೆ. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿ 28 ಎಂಎಂಟಿಯನ್ನು 35 ಎಂಎಂಟಿಗೆ ಹೆಚ್ಚಿಸಿದೆ. ಸಾಮಾಜಿಕ ಪರಿವರ್ತನಾ ಸಮುದಾಯ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.