ಅವಧಿಗೂ ಮುನ್ನ ಅಪರಾಧಿಗಳ ಬಿಡುಗಡೆ ಪ್ರಶ್ನಿಸಿದ್ದ ಬಲ್ಕೀಸ್ ಬಾನು ಅರ್ಜಿ ವಜಾ

Social Share

ನವದೆಹಲಿ,ಡಿ.17- ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಅವಧಿಗೂ ಮುನ್ನಾ ಬಿಡುಗಡೆ ಮಾಡಿದ ಆದೇಶ ಮರು ಪರಿಶೀಲಿಸುವಂತೆ ಕೋರಿದ್ದ ಸಂತ್ರಸ್ಥೆ ಬಲ್ಕೀಸ್ ಬಾನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

2002ರ ಗುಜರಾತ್ ಗಲಭೆಗೆ ಸಂಬಂಸಿದಂತೆ ಶಿಕ್ಷೆಗೆ ಗುರಿಯಾಗಿದ್ದ 11 ಮಂದಿ ಅಪರಾಗಳನ್ನು ಕಳೆದ ಆಗಸ್ಟ್ ನ 15ರಂದು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. 2022ರ ಮೇನಲ್ಲಿ ಸುಪ್ರೀಂಕೋರ್ಟ್ ಅಪರಾಗಳ ಬಿಡುಗಡೆ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದನ್ನು ಬಲ್ಕೀಸ್ ಬಾನು ಪ್ರಶ್ನಿಸಿದ್ದರು. ಇದನ್ನು ಬಲ್ಕೀಸ್ ಬಾನು ಪ್ರಶ್ನಿಸಿದರು. ನ್ಯಾಯಮೂರ್ತಿ ಬೇಲಾ ತ್ರಿವೇದಿ ನೇತೃತ್ವದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

2002ರಲ್ಲಿ ಗೋದ್ರಾ ರೈಲಿಗೆ ಬೆಂಕಿ ಹಚ್ಚಿ ಕರಸೇವಕರನ್ನು ಜೀವಂತವಾಗಿ ಸುಟ್ಟು ಹಾಕಿದ ಘಟನೆಗೆ ಪ್ರತಿಕಾರವಾಗಿ ನಡೆದ ವ್ಯಾಪಕ ಗಲಭೆಗಳಲ್ಲಿ ಬಲ್ಕೀಸ್ ಬಾನು ಅವರ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಆ ವೇಳೆಗೆ ಐದು ತಿಂಗಳ ಗರ್ಭೀಣಿಯಾಗಿದ್ದ 21 ವರ್ಷದ ಬಲ್ಕೀಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು.

ತನಿಖೆಗೆ ನಡೆದು ಹಲವು ಮಂದಿಯನ್ನು ಬಂಸಲಾಗಿತ್ತು. 2008ರಲ್ಲಿ ತೀರ್ಪು ಪ್ರಕಟಗೊಂಡು 11 ಮಂದಿಗೆ ಜೀವಾವ ಶಿಕ್ಷೆಗೆ ವಿಸಲಾಗಿತ್ತು. ಈ ನಡುವೆ ಸನ್ನಡತೆ ಆಧಾರದ ಮೇಲೆ ತಮ್ಮನ್ನು ಬಿಡುಗಡೆ ಮಾಡುವಂತೆ ಶಿಕ್ಷಾಬಂಧಿ ಖೈದಿಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು.

1992ರ ಜುಲೈ9ರ ನೀತಿಯನ್ನು ಪರಿಗಣಿಸಿ ನಮನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಖೈದಿಯ ಮನವಿಯನ್ನು ಪರಿಗಣಿಸುವಂತೆ ಗುಜರಾತ್ ಸರ್ಕಾರಕ್ಕೆ ಇದೇ ವರ್ಷದ ಮೇನಲ್ಲಿ ಸೂಚನೆ ನೀಡಿತ್ತು.

ಅದನ್ನು ಆಧರಿಸಿ ನಿರ್ಧಾರ ತೆಗೆದುಕೊಂಡ ಗುಜರಾತ್ ಸರ್ಕಾರ 14 ವರ್ಷ ಶಿಕ್ಷೆ ಅನುಭವಿಸಿದ ಖೈದಿಗಳನ್ನು ಸನ್ನಡತೆ ಆಧರಿಸಿ, ಜೈಲಿನಿಂದ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಅನುಮತಿ ಪಡೆಯಿತು. ಅಪರಾಧಿಗಳು ಜೈಲಿನಿಂದಲೂ ಬಿಡುಗಡೆಯಾದರು.

#SupremeCourt, #rejects, #BilkisBano, #plea, #verdict, #Gujarat, #remissionpolicy,

Articles You Might Like

Share This Article