ಪ್ರಧಾನಿಗೆ ಭದ್ರತಾಲೋಪ : ಸುಪ್ರೀಂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ

Social Share

ನವದೆಹಲಿ, ಜ.10- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಂಜಾಬ್ ಪ್ರವಾಸದ ವೇಳೆ ನಡೆದಿದೆ ಎನ್ನಲಾದ ಭದ್ರತಾಲೋಪ ಕುರಿತಂತೆ ತನಿಖೆ ನಡೆಸಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾೀಧಿಶರ ನೇತೃತ್ವದಲ್ಲಿ ತನಿಖಾ ಸಮಿತಿಯೊಂದರನ್ನು ರಚನೆ ಮಾಡಿದೆ.
ಸುಪ್ರಿಂಕೋರ್ಟ್‍ನ ನಿವೃತ್ತ ನ್ಯಾಯಾೀಶರು ತನಿಖಾ ಸಮಿತಿಯ ನೇತೃತ್ವ ವಹಿಸಲಿದ್ದು, ಪಂಜಾಬ್‍ನ ಪೊಲೀಸ್ ಮಹಾನಿರ್ದೇಶಕರು, ರಾಷ್ಟ್ರೀಯ ತನಿಖಾ ದಳದ ಐಜಿ, ಹೈಕೋರ್ಟ್‍ನ ರಿಜಿಸ್ಟರ್ ಸಮಿತಿಯ ಸದಸ್ಯರಾಗಿರಲಿದ್ದಾರೆ ಎಂದು ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಪಂಜಾಬ್ ಸರ್ಕಾರ ನಿವೃತ್ತ ನ್ಯಾಯಾೀಧಿಶರ ನೇತೃತ್ವದಲ್ಲಿ ರಚಿಸಿದ್ದ ವಿಚಾರಣಾ ಸಮಿತಿ ಮತ್ತು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ರಚಿಸಿರುವ ಸಮಿತಿಯ ತನಿಖೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪಂಜಾಬ್‍ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಪ್ರಕರಣವನ್ನು ತನಿಖೆ ನಡೆಸಿ ವರದಿ ಸಲ್ಲಿಸಬಹುದು ಎಂದು ಹೇಳಿದೆ.
ಪ್ರಧಾನಿ ಭದ್ರತಾಲೋಪ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಪಂಜಾಬ್ ರಾಜ್ಯ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ಪೀಠದ ಮುಂದೆ ವಾದ ಮಂದಿಸಿರುವ ಅಡ್ವೋಕೆಟ್ ಜನರಲ್ ಅವರು, ಕೇಂದ್ರ ಸರ್ಕಾರ ಘಟನೆಯಲ್ಲಿ ರಾಜಕಾರಣ ಬೆರಸುತ್ತಿದೆ.
ಕೇಂದ್ರ ಗೃಹ ಸಚಿವಾಲಯದಿಂದ ರಚಿಸಲಾಗಿರುವ ವಿಚಾರಣಾ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಏಳು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶೋಕಾಸ್ ನೋಟಿಸ್ ನೀಡಿದೆ. ಯಾವುದೇ ವಿಚಾರಣೆ ನಡೆಸದೆ ಕ್ರಮಕ್ಕೆ ಮುಂದಾಗಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಈಗಾಗಲೇ ಪ್ರಧಾನಿ ಪ್ರವಾಸಕ್ಕೆ ಸಂಬಂಧ ಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ. ಆದಾಗ್ಯೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೇಗೆ ನೋಟಿಸ್ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪ್ರಧಾನಿ ಪ್ರವಾಸದ ವೇಳೆ ಸಂಪೂರ್ಣವಾಗಿ ಭದ್ರತಾಲೋಪವಾಗಿದೆ. ರೈತರ ಪ್ರತಿಭಟನೆಯ ಸ್ಥಳದಿಂದ 100 ಮೀಟರ್ ಅಂತರದವರೆಗೂ ಪ್ರಧಾನಿ ಮತ್ತು ಅವರ ಬೆಂಗಾವಲು ಪಡೆಗಳಿದ್ದ ವಾಹನಗಳು ತಲುಪಿವೆ. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ಪೊಲೀಸ್ ಮಹಾನಿರ್ದೇಕರು ಹೊರಬೇಕು.
ವಿಶೇಷ ಭದ್ರತಾ ಪಡೆಯ ನಿಯಮಾವಳಿಗಳು ಮತ್ತು ನೀಲಿಪುಸ್ತಕದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಭದ್ರತಾಲೋಪವಾಗಿರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಪ್ರಧಾನಿ ಅವರ ಪ್ರಯಾಣ ಬತಿಂದಾ ವಿಮಾನ ನಿಲ್ದಾಣದಿಂದ ಶುರುವಾಗಿದೆ. ಪೊಲೀಸ್ ಮಹಾನಿರ್ದೇಶಕರು ದಾರಿ ಸುಗಮವಾಗಿದೆ ಎಂದು ಎಸ್‍ಜಿಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಲೋಪವನ್ನು ಅವರೇ ಒಪ್ಪಿಕೊಂಡಿದ್ದಾರೆ. ಹಾಗಾಗಿ ಮತ್ತೆ ತನಿಖೆ ಅಥವಾ ವಿಚಾರಣೆಯ ಅಗತ್ಯವಿಲ್ಲ. ಹಾಗಾಗಿ ನೇರವಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ವಾದಿಸಿದರು.
ರಾಜ್ಯ ಸರ್ಕಾರ ತಪ್ಪು ಮಾಡಿದ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಪ್ರಧಾನಿ ಅವರ ಪ್ರವಾಸದ ಹೊಣೆಗಾರಿಕೆ ರಾಜ್ಯ ಸರ್ಕಾರಗಳದ್ದು, ಸದಾ ಕಾಲ ಪ್ರಧಾನಿ ಪ್ರವಾಸಕ್ಕೆ ಬದಲಿ ಮಾರ್ಗವನ್ನು ಸಜ್ಜುಗೊಳಿಸಿಟ್ಟುಕೊಂಡಿರಬೇಕು ಎಂದು ನೀಲಿಪುಸ್ತಕ ಹಾಗೂ ಎಸ್‍ಜಿಪಿ ಕಾಯ್ದೆಯಲ್ಲಿ ಉಲ್ಲೇಖವಿದೆ. ಆದರೂ ರಾಜ್ಯ ಸರ್ಕಾರದ ಅಕಾರಿಗಳು ನಿರ್ಲಕ್ಷ್ಯ ತೋರಿಸಿದರು ಎಂದು ತುಷಾರ್ ಮೆಹ್ತಾ ಆರೋಪಿಸಿದರು.
ವಿಚಾರಣೆ ಆಲಿಸಿದ ನ್ಯಾಯಮೂರ್ತಿಗಳಾದ ಹಿಮಕೋಲ್ಹಿ ಅವರು, ನ್ಯಾಯಾಲಯ ಯಾವ ಅಭಿಪ್ರಾಯ ತಳೆಯಬೇಕು ಎಂಬುದನ್ನು ನಿಮ್ಮ ತಲೆಯಲ್ಲಿ ಸಿದ್ದವಾಗಿಟ್ಟುಕೊಂಡಿದ್ದೀರಾ. ಹಾಗಿದ್ದ ಮೇಲೆ ನ್ಯಾಯಾಲಯಕ್ಕೆ ಬಂದಿದ್ದೇಕೆ. ಶುಕ್ರವಾರ ಕುದುರೆ ಕಟ್ಟುವುದಾಗಿ ತಿಳಿಸಿದ್ದೀರಾ ಎಂದರು.
ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ನೀವು ನೀಡಿರುವ ಶೋಕಾಸ್ ನೋಟಿಸ್‍ನಲ್ಲಿ ದ್ವಂದ ನಿಲುವುಗಳಿವೆ. ಒಂದೆಡೆ ವಿಚಾರಣೆಗೆ ಸಮಿತಿ ರಚಿಸಿರುವುದಾಗಿ ಹೇಳಿದ್ದೀರಿ ಮತ್ತೊಂದೆಡೆ ತಪ್ಪು ಸ್ಪಷ್ಟವಾಗಿದೆ. ವಿಚಾರಣೆಯ ಅಗತ್ಯವಿಲ್ಲ ಎಂದು ಹೇಳುತ್ತಿದ್ದೀರಾ. ಯಾರು ತಪ್ಪು ಮಾಡಿದ್ದರೆ, ತನಿಖೆ ಎಲ್ಲಿ ನಡೆದಿದೆ ಎಂದು ಪ್ರಶ್ನಿಸಿದರು.

Articles You Might Like

Share This Article