ನೋಟು ಅಮಾನ್ಯೀಕರಣ ಕುರಿತ ವಿಚಾರಣೆ ಅ.12ಕ್ಕೆ ಮುಂದೂಡಿಕೆ

Social Share

ನವದೆಹಲಿ, ಸೆ.28- ಕೇಂದ್ರದ ಸರ್ಕಾರ 2016 ರಲ್ಲಿ ಕೈಗೊಂಡ ನೋಟು ಅಮಾನ್ಯೀಕರಣ ನಿರ್ಧಾರ ಸೂಕ್ತವಾದುದ್ದೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 12ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಸಂವಿಧಾನ ಪೀಠವು ವಿಚಾರಣೆ ಆರಂಭಿಸುತ್ತಿದ್ದಂತೆ, ಈ ಹಂತದಲ್ಲಿ ನೋಟು ಅಮಾನ್ಯೀಕರಣ ಪರಿಗಣನೆ ಅಗತ್ಯವೇ ಎಂದು ಅಚ್ಚರಿ ವ್ಯಕ್ತ ಪಡಿಸಿದೆ. ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಈ ವಿಷಯವು ಪರಿಗಣನೆಗೆ ಉಳಿಯುವುದಿಲ್ಲ. ಆದಾಗ್ಯೂ, ಪ್ರಕರಣವನ್ನು ಪರಿಶೀಲಿಸಬಹುದು ಎಂದು ಅಭಿಪ್ರಾಯ ಹೇಳಿದರು.

ಅರ್ಜಿದಾರರ ಪರ ವಕೀಲರು ವಾದ ಮಂಡನೆ ಬಳಿಕ, ಪ್ರತಿಕ್ರಿಯಿಸಿದ ಪೀಠ, ಈಗಾಗಲೇ ನ್ಯಾಯಾಲಯದ ಮುಂದೆ ಬಾಕಿ ಪ್ರಕರಣಗಳ ಹೊರೆ ಇರುವಾಗ ನೋಟು ಅಮಾನ್ಯೀಕರಣದಂತಹ ಪರಿಶೀಲನೆ ಅಗತ್ಯವೇ ಎಂದು ಪ್ರಶ್ನಿಸಿದೆ.

ಆದರು ಅಕ್ಟೋಬರ್ 12 ರಂದು ವಿಚಾರಣೆ ನಡೆಸಲಾಗುವುದು. ಈ ನಿರ್ಧಾರ ಶೈಕ್ಷಣಿಕವಾಗಿದೆಯೇ ಮತ್ತು ಅದನ್ನು ಆಲಿಸಬಹುದೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

500 ಮತ್ತು 1000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು 2016ರ ನವೆಂಬರ್ 8ರಂದು ಕೇಂದ್ರ ಸರ್ಕಾರದ ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ 58 ಅರ್ಜಿಗಳು ಸಲ್ಲಿಕೆಯಾಗಿದ್ದು, ಸುಪ್ರೀಂಕೋರ್ಟ್ ಅವುಗಳ ವಿಚಾರಣೆ ನಡೆಸಲಿದೆ.

2016ರ ಡಿಸೆಂಬರ್ 16ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ಪೀಠವು ನೋಟು ಅಮಾನ್ಯೀಕರಣದ ನಿರ್ಧಾರದ ಸಿಂಧುತ್ವ ಮತ್ತುಇತರ ವಿಷಯಗಳ ಪರಿಶೀಲನೆಗಾಗಿ ಐದು ನ್ಯಾಯಾೀಧಿಶರ ದೊಡ್ಡ ಪಿಠ ರಚಿಸಿದ್ದರು.

2016ರ ನವೆಂಬರ್ 8 ಅಸೂಚನೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಅಲ್ಟ್ರಾ ವೈರ್ಸ್ ನಿಬಂಧನೆಗಳು ಮತ್ತು ಅಧಿಸೂಚನೆಯು ನಿಬಂಧನೆಗಳು, ಸಂವಿಧಾನದ 300 (ಎ) ವಿಯನ್ನು ಉಲ್ಲಂಘಿಸುತ್ತದೆಯೇ ಎಂಬ ಪ್ರಶ್ನೆಯನ್ನು ಐದು ನ್ಯಾಯಾೀಧಿಶರ ಪೀಠ ಪ್ರಶ್ನಿಸಲಿದೆ. ಇದಕ್ಕೂ ಮೊದಲು ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ 2016 ರ ಅಧಿಸೂಚನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಅಡಿಯಲ್ಲಿ ಮಾನ್ಯ ಎಂದು ಪರಿಗಣಿಸಿತ್ತು, ಆದರೆ ಸಂವಿಧಾನದ 14 ಮತ್ತು 19 ನೇ ವಿಧಿಗಳಿಗೆ ಅತಿರೇಕ ಎಂದು ಅಭಿಪ್ರಾಯ ಪಟ್ಟಿತ್ತು.

ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಹಣದಿಂದ ನಗದು ಹಿಂಪಡೆಯುವಿಕೆಯ ಮಿತಿಗೆ ಕಾನೂನಿನಲ್ಲಿ ಯಾವುದೇ ಆಧಾರ ಹೊಂದಿಲ್ಲ. ಇದು ಸಂವಿಧಾನದ14,19 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಪೀಠ ಹೇಳಿತು.

ಅಧಿಸೂಚನೆ ಅನುಷ್ಠಾನದ ಕಾರ್ಯವಿಧಾನ, ವಸ್ತುನಿಷ್ಠ ಅಸಮಂಜಸತೆಯಿಂದ ಬಳಲುತ್ತಿದೆ. ಆ ಮೂಲಕ ಆರ್ಟಿಕಲ್ 14 ಮತ್ತು 19 ಅನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿತ್ತು. ಇಂತಹ ಹಲವಾರು ಪ್ರಶ್ನೆಗಳನ್ನು ಸರ್ವೋಚ್ಚ ನ್ಯಾಯಾಲಯ ಪರಿಶೀಲನೆ ನಡೆಸಲಿದೆ.

Articles You Might Like

Share This Article