ಸಲಿಂಗ ವಿವಾಹ ಮಾನ್ಯತೆ ಬಯಸುವ ಅರ್ಜಿಗಳು ಸುಪ್ರೀಂ ಪೀಠಕ್ಕೆ ವರ್ಗಾವಣೆ

Social Share

ನವದೆಹಲಿ,ಜ.6- ಸಲಿಂಗ ವಿವಾಹ ಮಾನ್ಯಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ತನ್ನ ಅಂಗಳಕ್ಕೆ ವರ್ಗಾವಣೆ ಮಾಡಿಕೊಂಡಿದ್ದು, ಮುಂದಿನ ವಿಚಾರಣೆಗೆ ಮಾರ್ಚ್ 13ಕ್ಕೆ ಸಮಯ ನಿಗದಿ ಮಾಡಿದೆ.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಮತ್ತು ಜೆ.ಪಿ.ಪರ್ದಿವಾಲ ಅವರನ್ನೊಳಗೊಂಡ ವಿಭಾಗೀಯ ಪೀಠ, ಇಂದು ವಿಚಾರಣೆ ನಡೆಸಿ ಸಲಿಂಗ ವಿವಾಹಗಳ ಕುರಿತು ಫೆಬ್ರವರಿ 15ರೊಳಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅದೇ ರೀತಿ ಎಲ್ಲಾ ಅರ್ಜಿದಾರರು ಇದೇ ಅವದಿಯ ಒಳಗೆ ಪ್ರಮಾಣ ಪತ್ರ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ಅರ್ಜಿದಾರರಿಗೆ ಭೌತಿಕವಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ವರ್ಚುವಲ್ ಮೂಲಕವೂ ವಿಚಾರಣೆಗೆ ಹಾಜರಾಗಲು ಅವಕಾಶ ಇದೆ ಎಂದು ಸುಪ್ರಿಂಕೋರ್ಟ್ ಪೀಠ ಹೇಳಿದೆ.

ದೆಹಲಿಯ ಪಾಲಿಕೆ ಸಭೆಯಲ್ಲಿ ತಳ್ಳಾಟ-ನೂಕಾಟ, ಗುದ್ದಾಟ

ಸಲಿಂಗ ವಿವಾಹದ ಕುರಿತು ದೇಶದಲ್ಲಿರುವ ಕಾನೂನು ಮತ್ತು ರೂಢಿಗಳಗಳಿದ್ದರೆ ಅವುಗಳ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರದ ಪರ ವಕೀಲರಿಗೆ ನ್ಯಾಯಾಲಯ ಸೂಚನೆ ನೀಡಿದೆ.

Supreme Court, transfers, all pleas, same-sex, marriages,

Articles You Might Like

Share This Article