BIG NEWS : ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್

Social Share

ನವದೆಹಲಿ,ನ.7- ಆರ್ಥಿಕ ದುರ್ಬಲರಿಗೆ ನೀಡಿರುವ ಶೇ.10ರಷ್ಟು ಮೀಸಲಾತಿಯ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂಕೋರ್ಟ್‍ನ ಐವರು ನ್ಯಾಯಮೂರ್ತಿಗಳ ಸಂಯುಕ್ತಪೀಠ ಎತ್ತಿ ಹಿಡಿದಿದೆ.

ಬಹುನಿರೀಕ್ಷಿತ ತೀರ್ಪು ಇಂದು ಪ್ರಕಟವಾಗಿದೆ. 2019ರ ಜನವರಿಯಲ್ಲಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಜಾರಿಗೊಳಿಸಲಾದ ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್) ಮೀಸಲಾತಿ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 40ಕ್ಕೂ ಹೆಚ್ಚು ಅರ್ಜಿಗಳನ್ನು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಸಂಯುಕ್ತ ಪೀಠ ವಿಚಾರಣೆ ನಡೆಸಿತ್ತು.

ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್.ರವೀಂದ್ರಭಟ್, ಬೇಲಾ.ಎಂ ತ್ರಿವೇದಿ, ಜೆ.ಬಿ.ಪರ್ದಿವಾಲ ಅವರುಗಳು ಪೀಠದಲ್ಲಿದ್ದರು. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಬೇಲಾ ತ್ರಿವೇದಿ, ಜೆ.ಬಿ.ಪರ್ದಿವಾಲ ಇಡಬ್ಲ್ಯುಎಸ್ ಮೀಸಲಾತಿಯನ್ನು ಎತ್ತಿ ಹಿಡಿದಿದ್ದು, ಮುಖ್ಯ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ರವೀಂದ್ರ ಭಟ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ 3:2ರ ಅನುಪಾತದಲ್ಲಿ ತೀರ್ಪು ಹೊರಬಿದ್ದಿದೆ.

ಚಳಿಗಾಲದ ಅಲರ್ಜಿಯಿಂದ ಪಾರಾಗಬೇಕಾದರೆ ಈ 6 ಆಹಾರ ಸೇವಿಸಿ

ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಇಡಬ್ಲ್ಯುಎಸ್ ಮೀಸಲಾತಿಯಿಂದ ಸಾಂವಿಧಾನಿಕ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ. ಮೀಸಲಾತಿಯ ಪ್ರಮಾಣ ಶೇ.50ರಷ್ಟು ಮೀರಬಾರದು ಎಂಬ ಮಿತಿಯನ್ನು ಘಾಸಿಗೊಳಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮೂಲಕ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನ್ಯಾಯಾಂಗದ ಬೆಂಬಲ ದೊರೆತಂತಾಗಿದೆ. ತಮಿಳುನಾಡು ಸರ್ಕಾರ ಸೇರಿದಂತೆ 40ಕ್ಕೂ ಹೆಚ್ಚು ಸಂಘಸಂಸ್ಥೆಗಳು ಇಡಬ್ಲ್ಯುಎಸ್ ಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನ ಮುಂದೆ ಅರ್ಜಿ ಸಲ್ಲಿಸಿದ್ದವು. ಇಡಬ್ಲ್ಯುಎಸ್ ಮೀಸಲಾತಿ ಜಾರಿಗಾಗಿ ಸಂವಿಧಾನದ 103ನೇ ತಿದ್ದುಪಡಿ ಸಾಧುವಲ್ಲ.

ಕಲಂ 15(6) ಮತ್ತು 16(6) ಸೇರ್ಪಡೆ ಅಸಂವಿಧಾನಿಕ ಎಂದು ವಾದಿಸಲಾಗಿತ್ತು. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1992ರಲ್ಲಿ ನೀಡಿದ್ದ ತೀರ್ಪಿನ ಪ್ರಕಾರ ಮೀಸಲಾತಿಯ ಒಟ್ಟು ಪ್ರಮಾಣ ಶೇ.50ರಷ್ಟನ್ನು ದಾಟಬಾರದು ಎಂಬ ಮಿತಿ ಕೂಡ ಇಡಬ್ಲ್ಯುಸ್‍ನಿಂದ ಘಾಸಿಗೊಳಲಿದೆ ಎಂದು ವಾದಿಸಲಾಗಿತ್ತು. ಆದರೆ ನ್ಯಾಯಾೀಶರನ್ನು ಇದನ್ನು ತಳ್ಳಿ ಹಾಕಿದ್ದಾರೆ.

ಅಮೆರಿಕ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

ಸತತವಾಗಿ ಏಳು ದಿನಗಳ ಕಾಲ 20 ಅವೇಶನಗಳಲ್ಲಿ ವಾದ-ವಿವಾದ ಆಲಿಸಿದ ಸುಪ್ರೀಂಕೋರ್ಟ್ ಸೆ.27ರಂದು ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮೊದಲು ತಮ್ಮ ತೀರ್ಪನ್ನು ಪ್ರಕಟಿಸಿದ್ದು, ಸಂವಿಧಾನ ತಿದ್ದುಪಡಿಯನ್ನು ಎತ್ತಿ ಹಿಡಿದರು.

ನ್ಯಾಯಮೂರ್ತಿಗಳಾದ ಪರ್ದಿವಾಲಾ, ಮೀಸಲಾತಿ ಅರ್ನಿಷ್ಟಾವಗೆ ಮುಂದುವರೆಯುವುದು ಸರಿಯಲ್ಲ ಎಂದರು. ನ್ಯಾಯಮೂರ್ತಿ ರವೀಂದ್ರ ಭಟ್ ಅವರು ಇದನ್ನು ನಿರಾಕರಿಸಿದರು. ಅವರು ಕೆಲವು ಪ್ರಶ್ನೆಗಳನ್ನು ತಮ್ಮ ತೀರ್ಪಿನಲ್ಲಿ ಮುಂದಿಟ್ಟಿದ್ದು,

ರಾಜ್ಯ ಸರ್ಕಾರಗಳು ಆರ್ಥಿಕವಾಗಿ ಹಿಂದುಳಿದವರಿಗೆ ಬಡತನದಿಂದ ಬಳಲುತ್ತಿರುವವರಿಗೆ ಮೀಸಲಾತಿಯನ್ನು ನೀಡಬಹುದೇ? ಆರ್ಥಿಕ ಸ್ಥಿತಿಗತಿ ಆಧಾರದಲ್ಲಿನ ಮೀಸಲಾತಿ ಅಮಾನ್ಯವೇ? ಎಂದು ಪ್ರಶ್ನಿಸಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಹೊರತುಪಡಿಸಿ ಇಡಬ್ಲ್ಯುಎಸ್ ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದಾರೆ.


ನ್ಯಾಯಮೂರ್ತಿ ತ್ರಿವೇದಿ ಅವರು, ಭಾರತದಲ್ಲಿನ ಹಳೆಯ ಜಾತಿ ಪದ್ದತಿ ಮೀಸಲಾತಿ ಜಾರಿಗೆ ಕಾರಣ ಎಂಬುದನ್ನು ಒಪ್ಪಲಾಗುವುದಿಲ್ಲ. ಮೀಸಲಾತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಸಮಾನವಾದ ಅವಕಾಶಗಳನ್ನು ಪಡೆಯುತ್ತಾರೆ ಎಂಬ ಅಭಿಪ್ರಾಯವನ್ನು ಸ್ವತಂತ್ರ ಭಾರತದ 75ನೇ ವರ್ಷದಲ್ಲಿ ಮರುಪರಿಶೀಲಿಸುವ ಅಗತ್ಯವಿದೆ. ಮೀಸಲಾತಿಗಳು ಪರಿವರ್ತನೆಯ ಸಾಂವಿಧಾನಿಕತೆಯನ್ನು ಕುಗ್ಗಿಸಬಹುದು ಎಂದು ವಿಶ್ಲೇಷಿಸಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆ ನಡೆಸದಿರಲು ಆಯೋಗ ನಿರ್ಧಾರ ..?

ಮುಖ್ಯ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಅವರು ನಾಳೆ ನಿವೃತ್ತರಾಗಲಿದ್ದು, ಅವರ ನೇತೃತ್ವದ ಪೀಠದಿಂದ ಇಂದು ಮಹತ್ವದ ತೀರ್ಪು ಹೊರಬರಲಿದೆ.

Articles You Might Like

Share This Article