ಕಾಸರಗೂಡಿನಲ್ಲಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಇಂದು ಟೆಕ್ಸಾಸ್ ಜಿಲ್ಲಾ ನ್ಯಾಯಾಧೀಶ..!

Social Share

ಟೆಕ್ಸಾಸ್,ಜ.8- ಅಮೆರಿಕಾದ ಟೆಕ್ಸಾಸ್ ಜಿಲ್ಲಾ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿರುವ ಭಾರತೀಯ ಮೂಲದ ಸುರೇಂದ್ರನ್ ಕೆ ಪಟೇಲ್ ಅವರು ನನ್ನ ಈ ಸಾಧನೆಗೆ ಬಾಲ್ಯದ ಕಷ್ಟದ ಜೀವನವೇ ಕಾರಣ ಎನ್ನುವುದನ್ನು ಸ್ಮರಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಟೆಕ್ಸಾಸ್‍ನಲ್ಲಿ ಜಿಲ್ಲಾ ನ್ಯಾಯಾೀಧಿಶರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇರಳದ ಕಾಸರಗೂಡು ಮೂಲದ 51 ವರ್ಷದ ಸುರೇಂದ್ರನ್ ಕೆ ಪಟೇಲ್ ಅವರು ಬಾಲ್ಯದಲ್ಲಿ ತಾವು ಬೀಡಿ ಕಟ್ಟುವ ದಿನಗಳು ಮತ್ತು ಮನೆಗೆಲಸಗಾರರಾಗಿ ಕೆಲಸ ಮಾಡಿದ್ದು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಯಶಸ್ಸನ್ನು ಸಾಧಿಸಲು ಸಹಾಯವಾಯಿತು ಎಂದು ಹೇಳಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ಸುರೇಂದ್ರನ್ ಅವರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ 10 ನೇ ತರಗತಿಯಲ್ಲೇ ಶಾಲೆ ತೊರೆಯಬೇಕಾಯಿತು. ಆ ಸಂದರ್ಭದಲ್ಲಿ ಬೀಡಿ ಕಟ್ಟುತ್ತಾ, ದಿನಗೂಲಿ ಕೆಲಸ ಮಾಡುತ್ತಿದ್ದ ದೃಶ್ಯಗಳು ನನ್ನ ಕಣ್ಣ ಮುಂದೆ ಪದೆ ಪದೆ ಬರುತ್ತಿದ್ದ ಹಿನ್ನಲೆಯಲ್ಲಿ ನಾನು ಇಂದು ಇಂತಹ ಸಾಧನೆ ಮಾಡಲು ಸಹಕಾರಿಯಾಯಿತು ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಸಿಸಿ ಕ್ಯಾಮೆರಾಗಳ ಸುಳಿವಿನಿಂದ ಸಿಕ್ಕಿಬಿದ್ದ ಮೂವರು ಮೊಬೈಲ್ ಸುಲಿಗೆಕೋರರು

ತನ್ನ ಹಳ್ಳಿಯಲ್ಲಿರುವ ಸ್ನೇಹಿತನೊಬ್ಬ ಹೋಟೆಲ್‍ನಲ್ಲಿ ಕೆಲಸ ಮಾಡುತ್ತ ನನ್ನ ಕಾನೂನು ಪದವಿ ಸೇರಿದಂತೆ ತನ್ನ ಶಿಕ್ಷಣ ಪೂರ್ಣಗೊಳಿಸಲು ಸಹಾಯ ಮಾಡಿದ ನಂತರ ನಾನು ಅಮೆರಿಕಾಕ್ಕೆ ಬಂದು ಓದನ್ನು ಮುಂದುವರೆಸಿ ಈ ಹಂತಕ್ಕೆ ಬಂದು ತಲುಪಿದ್ದೇನೆ ಎಂದು ಹೇಳಿದ್ದಾರೆ.

ಟೆಕ್ಸಾಸ್ ಜಿಲ್ಲಾ ನ್ಯಾಯಮೂರ್ತಿ ಸ್ಥಾನಕ್ಕೆ ಸ್ರ್ಪಸಿದ್ದಾಗ ಹಲವರು ನನ್ನ ಇಂಗ್ಲೀಷ್ ಉಚ್ಚಾರಣೆಯ ಮೇಲೆ ಕಾಮೆಂಟ್‍ಗಳನ್ನು ಮಾಡಿದರು. ನಾನು ಇಂತಹ ಮಹತ್ತರ ಸ್ಥಾನ ಅಲಂಕರಿಸುತ್ತೇನೆ ಎಂದು ನನ್ನ ಬಣದವರು ನಂಬಿರಲಿಲ್ಲ. ಆದರೆ, ಇಂದು ನಾನು ಜಿಲ್ಲಾ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದೇನೆ ಎಂದು ಭಾವುಕರಾದರು.

ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು ಅಪ್ರಾಪ್ತ ವಿದ್ಯಾರ್ಥಿಗಳು

ನಾನು ಇದನ್ನು ಸಾಧಿಸುತ್ತೇನೆ ಎಂದು ಯಾರೂ ನಂಬಿರಲಿಲ್ಲ. ಆದರೆ ನಾನು ಇಲ್ಲಿದ್ದೇನೆ. ಎಲ್ಲರಿಗೂ ಒಂದೇ ಒಂದು ಸಂದೇಶವಿದೆ. ನಿಮ್ಮ ಭವಿಷ್ಯವನ್ನು ಯಾರೂ ನಿರ್ಧರಿಸಲು ಬಿಡಬೇಡಿ. ನೀವು ಮಾತ್ರ ಅದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.

#SurendranKPattel, #Kerala, #districtjudge, #Texas,

Articles You Might Like

Share This Article