ಬೆಂಗಳೂರು,ಜು.28- ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಜಿಹಾದಿ ಮನಸ್ಥಿತಿಯ ದುಷ್ಟ ಶಕ್ತಿಗಳ ವಿರುದ್ಧ ಅಗತ್ಯ ಕಂಡು ಬಂದರೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಎಚ್ಚರಿಕೆ ನೀಡಿದ್ದಾರೆ.
ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮಾದರಿಯನ್ನು ಕೊಟ್ಟಿದ್ದು, ಬಿಜೆಪಿ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಲು ನಮ್ಮ ಪಕ್ಷ ಹಿಂದೆ-ಮುಂದೆ ನೋಡುವುದಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳ ರಕ್ಷಣೆ ಮಾಡುವುದು ಬಿಜೆಪಿ ಹೊರತು ಕಾಂಗ್ರೆಸ್‍ನಿಂದ ಸಾಧ್ಯವಿಲ್ಲ. ನಾವು ಮೂಲಭೂತ ಶಕ್ತಿಗಳನ್ನು ಸದೆಬಡಿಯಬೇಕೆಂದು ಹೇಳುತ್ತೇವೆ. ಇದೇ ಮಾತನ್ನು ತಾಕ್ಕತ್ತಿದ್ದರೆ ಕಾಂಗ್ರೆಸ್‍ನವರು ಹೇಳಲಿ ನೋಡೋಣ ಎಂದು ಸವಾಲೆಸೆದರು.
ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು ನಿಷೇಧ ಮಾಡಿದರೆ ಮತ್ತೆ ಬೇರೊಂದು ರೂಪದಲ್ಲು ಹುಟ್ಟುಕೊಳ್ಳುತ್ತವೆ. ಸಿಮಿಯನ್ನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ನಿಷೇಧ ಮಾಡಿತ್ತು. ಅದರ ಮತ್ತೊಂದು ಮುಖವಾಡವೇ ಈ ಎರಡು ಸಂಘಟನೆಗಳು ಎಂದು ಕಿಡಿಕಾರಿದರು.
ನಾವು ಸಂಘಟನೆ ನಿಷೇಧ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ. ಇದರ ಮೂಲವನ್ನು ಪತ್ತೆಹಚ್ಚಬೇಕು. ಹಾವನ್ನು ಬಡಿಯುವುದರ ಜತೆಗೆ ಅದರ ಹುತ್ತವನ್ನೂ ಸಹ ಕಿತ್ತೆಸೆದಾಗÀಲೇ ಮಾತ್ರ ಸಾಧ್ಯ ಎಂದು ಹೇಳಿದರು.
ಸರ್ಕಾರ ಯಾವುದೇ ದುಷ್ಟ ಶಕ್ತಿಗಳನ್ನು ಸದೆಬಡಿಯಲು ಹಿಂದೆ-ಮುಂದೆ ನೋಡುವುದಿಲ್ಲ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಗಂಭೀರವಾಗಿ ಚರ್ಚಿಸಿಯೇ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದರು.
ನನಗಿರುವ ಮಾಹಿತಿ ಪ್ರಕಾರ ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾರ್ಯಕರ್ತರ ಮನಸ್ಸಿಗೆ ನೋವಾಗಿರುವುದು ನಿಜ. ನೀವು ಆಕ್ರೋಶಕ್ಕೆ ಒಳಗಾದರೆ ಇದನ್ನು ಬೇರೆಯವರು ಲಾಭ ಪಡೆದುಕೊಳ್ಳುತ್ತಾರೆ. ಹಿಂದುಗಳನ್ನು ರಕ್ಷಣೆ ಮಾಡದಷ್ಟು ನಮ್ಮ ಸರ್ಕಾರ ದುರ್ಬಲವಾಗಿಲ್ಲ. ಕಾರ್ಯಕರ್ತರ ನೋವಿಗೆ ಸ್ಪಂದಿಸಲಿದೆ ಎಂದು ತಿಳಿಸಿದರು.