ಸೂರ್ಯ ಅಬ್ಬರ ಭಾರತಕ್ಕೆ `ವಿರಾಟ’ ಜಯ, ಸೂಪರ್ 4ಗೆ ಟೀಮ್ ಇಂಡಿಯಾ

Social Share

ದುಬೈ, ಸೆ. 1 – ಅರಬ್ಬರ ನಾಡಿನಲ್ಲಿ ವಿಜೃಂಭಿಸುತ್ತಿರುವ ರೋಹಿತ್ ಪಡೆಯು ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ( 68 ರನ್, 26 ಎಸೆತ, 6 ಬೌಂಡರಿ, 6 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ ( 59 ರನ್)ರ ಅಜೇತ ಅರ್ಧಶತಕಗಳ ನೆರವಿನಿಂದ ಹಾಂಗ್ಕಾಂಗ್ ವಿರುದ್ಧ 40 ರನ್ಗಳ ವಿರೋಚಿತ ಗೆಲುವು ಪಡೆಯುವ ಮೂಲಕ ಸೂಪರ್ 4ಗೆ ಪ್ರವೇಶ ಪಡೆದಿದೆ.

ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಸಿದ್ದ ರೋಹಿತ್ ಪಡೆಯು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು.

ಪಾಕ್ ವಿರುದ್ಧ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಉಪನಾಯಕ ಕೆ.ಎಲ್.ರಾಹುಲ್( 36 ರನ್, 2 ಸಿಕ್ಸರ್), ನಾಯಕ ರೋಹಿತ್ ಶರ್ಮಾ ( 21 ರನ್, 2 ಬೌಂಡರಿ, 1 ಸಿಕ್ಸರ್) ಉತ್ತಮ ಜೊತೆಯಾಟ ನೀಡಿದರು. ಆದರೆ ತಂಡದ ಮೊತ್ತ 94 ರನ್ಗಳಾಗುವಷ್ಟರಲ್ಲಿ ನಾಯಕ ಹಾಗೂ ಉಪನಾಯಕ ಪೆವಿಲಿಯನ್ ಸೇರಿದ್ದರು.

# ಸೂರ್ಯ – ವಿರಾಟ್ ಅಬ್ಬರ:
ರಾಹುಲ್ ಔಟಾಗುತ್ತಿದ್ದಂತೆ ಕ್ರೀಸ್ಗಿಳಿದ ಸೂರ್ಯಕುಮಾರ್ ಯಾದವ್ , ವಿರಾಟ್ ಜೊತೆ ಗೂಡಿ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆ ಸುರಿಸಿದರು. 7 ಓವರ್ಗಳಲ್ಲೇ ಈ ಜೋಡಿಯು 98 ರನ್ಗಳ ಅಜೇಯ ಕಾಣಿಕೆ ನೀಡುವ ಮೂಲಕ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 192 ಗುರಿ ಮುಟ್ಟಿಸಿದರು.
ಹಾಂಗ್ಕಾಂಗ್ ಪರ ಅಯೂಶ್ ಶುಕ್ಲಾ ಹಾಗೂ ಮೊಹಮ್ಮದ್ ಜಗನ್ಪಾರ್ ತಲಾ 1 ವಿಕೆಟ್ ಕಬಳಿಸಿದರು.

ಹಯಾತ್ ಮಿಂಚು:

193 ರನ್ಗಳ ಗುರಿ ಬೆನ್ನಟ್ಟಿದ ಹಾಂಗ್ಕಾಂಗ್ ಉತ್ತಮ ಆರಂಭ ಪಡೆದರೂ ಕೂಡ ಮಾಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಬೌಲರ್ಗಳ ಮೋಡಿಗೆ ತಲೆ ಬಾಗಿದರಾದರೂ ಬಾಬರ್ ಹಯಾತ್ (41 ರನ್, 3 ಬೌಂಡರಿ, 2 ಸಿಕ್ಸರ್), ಕೆ.ಶಾಹ (30 ರನ್, 2 ಬೌಂಡರಿ, 1 ಸಿಕ್ಸರ್) ನೆರವಿದ್ದರೂ ಕೂಡ 152 ರನ್ ಗಳಿಸಿ 40 ರನ್ಗಳಿಗೆ ಸೋಲು ಕಂಡಿತು.

ಭುವನೇಶ್ವರ್ಕುಮಾರ್, ಹರ್ಷದೀಪ್ ಸಿಂಗ್, ಆವೇಶ್ಖಾನ್, ಜಾಡೇಜಾ ತಲಾ 1 ವಿಕೆಟ್ ಕಬಳಿಸಿದರು. ಹಾಂಗ್ಕಾಂಗ್ ಸೂಪರ್ 4 ಪ್ರವೇಶಿಸಲು ಪಾಕ್ ವಿರುದ್ಧ ಗೆಲ್ಲುವ ಒತ್ತಡದಲ್ಲಿದೆ.

6 ವರ್ಷದ ನಂತರ ಮೋಡಿ ಮಾಡಿದ ಕೊಹ್ಲಿ

ದುಬೈ, ಸೆ. 1 – ಒಂದೂವರೆ ವರ್ಷದ ನಂತರ ಬ್ಯಾಟಿಂಗ್ ಲಯ ಕಂಡುಕೊಂಡಿರುವ ವಿರಾಟ್ ಕೊಹ್ಲಿ ಹಾಂಗ್ಕಾಂಗ್ ವಿರುದ್ಧ ಬೌಲಿಂಗ್ನಲ್ಲೂ ಗಮನ ಸೆಳೆದರು.

ವಿರಾಟ್ ಕೊಹ್ಲಿ ಸ್ಪಿನ್ನರ್ ಬೌಲರ್ ಆಗಿದ್ದರೂ ಕೂಡ 2016ರ ನಂತರ ಟ್ವೆಂಟಿ-20 ಮಾದರಿ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡಲಿರಲಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ 6 ವರ್ಷಗಳ ನಂತರ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಮೋಡಿ ಮಾಡಿದರು. ಕೊಹ್ಲಿ ಕೊನೆಯ ಬಾರಿಗೆ 2016ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು.

ಬ್ಯಾಟಿಂಗ್ನಲ್ಲೂ ಮಿಂಚಿದ ವಿರಾಟ್ ಕೊಹ್ಲಿ 1 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ ಅಜೇಯ 59 ರನ್ ಗಳಿಸಿ ಪ್ರೇಕ್ಷಕರ ಗಮನ ಸೆಳೆದರು.

Articles You Might Like

Share This Article