ಮ್ಯಾಕ್ಸ್ ವೆಲ್, ಕೊಹ್ಲಿ, ಯುವರಾಜ್ ಸಿಂಗ್ ದಾಖಲೆ ಮುರಿದ ಸೂರ್ಯಕುಮಾರ್

Social Share

ರಾಜ್‍ಕೋಟ್, ಜ. 8- ಶ್ರೀಲಂಕಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ತೋರಿ ಟಿ 20 ಕ್ರಿಕೆಟ್ ಜೀವನದಲ್ಲಿ 3ನೇ ಶತಕ ಸಿಡಿಸಿದ 360 ಡಿಗ್ರಿ ಸ್ಪೆಷಾಲಿಸ್ಟ್ ಬ್ಯಾಟ್ಸ್‍ಮನ್ ಸೂರ್ಯಕುಮಾರ್ ಅವರು ಪ್ರಮುಖ 3 ದಾಖಲೆ ನಿರ್ಮಿಸಿ ಗಮನ ಸೆಳೆದರು.

ಶ್ರೀಲಂಕಾದ ವೇಗದ ಹಾಗೂ ಸ್ಪಿನ್ ಬೌಲರ್‍ಗಳ ಎದುರು ತಮ್ಮ ಬ್ಯಾಟಿಂಗ್ ಪಾರುಪಾತ್ಯ ಮೆರೆದ ಸೂರ್ಯಕುಮಾರ್ 7 ಬೌಂಡರಿ, 9 ಸಿಕ್ಸರ್‍ಗಳ ಸಿಡಿಸುವ ಮೂಲಕ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿ, 51 ಎಸೆತಗಳಲ್ಲೇ 112 ರನ್ ಬಾರಿಸುವ ಮೂಲಕ ತಂಡಕ್ಕೆ 91 ರನ್‍ಗಳ ಗೆಲುವು ತಂದುಕೊಟ್ಟು, 2-1 ರಿಂದ ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಹಕಾರಿಯಾದರು.

ತಮ್ಮ ವಿಭಿನ್ನ ಶಾಟ್ಸ್‍ಗಳಿಂದ ಚೆಂಡನ್ನು 360 ಕೋನಗಳಿಗೂ ಅಟ್ಟುವ ಕಲೆ ಕರಗತ ಮಾಡಿಕೊಂಡಿರುವ ಸೂರ್ಯಕುಮಾರ್ ಯಾದವ್ ಪಂದ್ಯದಲ್ಲಿ 3 ಪ್ರಮುಖ ದಾಖಲೆ ನಿರ್ಮಿಸಿದರು.

26/11 ದಾಳಿ ಸಂದರ್ಭದಲ್ಲಿ ಬಚಾವಾಗಿದ್ದ ಗೌತಮ್ ಅದಾನಿ

ವೇಗದ 1500 ರನ್:
2021ರ ಫೆಬ್ರವರಿಯಲ್ಲಿ ಟಿ 20 ಕ್ರಿಕೆಟ್‍ಗೆ ಪಾರ್ದಾಪಣೆ ಮಾಡಿದ ಸೂರ್ಯಕುಮಾರ್, ಅಕ್ಟೋಬರ್ 2022ರಲ್ಲಿ 1000 ರನ್ ಪೂರೈಸಿದರು. 42 ಇನ್ನಿಂಗ್ಸ್‍ನಲ್ಲೇ 1500 ರನ್ ಬಾರಿಸುವ ಮೂಲಕ ಭಾರತದ ಪರ ವೇಗವಾಗಿ 1500 ರನ್ ಸಾಧನೆ ಮಾಡಿದ ಆಟಗಾರ ಎಂಬ ಕೀರ್ತಿಗೆ ಸೂರ್ಯಕುಮಾರ್ ಯಾದವ್ ಭಾಜನರಾದರು.

ಸೂರ್ಯಕುಮಾರ್ ಯಾದವ್ 843 ಎಸೆತಗಳಲ್ಲಿ 1500 ರನ್ ಗಳಿಸಿದ್ದರೆ, ಗ್ಲೆನ್ ಮ್ಯಾಕ್ಸ್‍ವೆಲ್ 940 ಚೆಂಡುಗಳನ್ನು ಎದುರಿಸಿ 1500 ರನ್‍ಗಳ ಗುರಿ ಮಟ್ಟಿದ್ದರು.

ಅತಿ ಹೆಚ್ಚು ಸಿಕ್ಸರ್‍ಗಳು:
ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ 51 ಎಸೆತಗಳಲ್ಲಿ ಅಜೇಯ 112 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ 11 ಸೋಟಕ ಸಿಕ್ಸರ್ ಸಿಡಿಸಿ, ಪಂದ್ಯವೊಂದರಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರರಾದರು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಒಂದೇ ಪಂದ್ಯದಲ್ಲಿ 7 ಸಿಕ್ಸರ್‍ಗಳನ್ನು ಸಿಡಿಸಿದ್ದರು.

ವಿಶ್ವಸಂಸ್ಥೆ 2023ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ : ಮೋದಿ

ವಿವಿಧ ತಂಡಗಳ ವಿರುದ್ಧ ಶತಕ:
ಭಾರತ ತಂಡದ ಪರ ರೋಹಿತ್ ಶರ್ಮಾ ಟಿ 20 ಮಾದರಿಯಲ್ಲಿ 4 ಶತಕ ಗಳಿಸಿ ಗಮನ ಸೆಳೆದಿದ್ದರೂ, ಸೂರ್ಯಕುಮಾರ್ ಯಾದವ್ ಅವರು 3 ಶತಕ ಸಿಡಿಸುವ ಮೂಲಕ ವಿಭಿನ್ನ ದಾಖಲೆ ನಿರ್ಮಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಕಳೆದ ಜುಲೈನಲ್ಲಿ ವಿಶ್ವಕಪ್ ವಿಜೇತ ತಂಡ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದರೆ, ನವೆಂಬರ್‍ನಲ್ಲಿ ನ್ಯೂಜಿಲ್ಯಾಂಡ್ ಸರಣಿಯಲ್ಲೂ ಶತಕ ಗಳಿಸಿ ಗಮನ ಸೆಳೆದಿದ್ದರು. ರಾಜ್‍ಕೋಟ್ ಪಂದ್ಯದಲ್ಲಿ ಅಜೇಯ 112 ರನ್ ಗಳಿಸಿ ಮೂರು ವಿಭಿನ್ನ ದೇಶಗಳ ವಿರುದ್ಧ ಶತಕ ಗಳಿಸಿದ ಬ್ಯಾಟ್ಸ್‍ಮನ್ ಎಂಬ ಖ್ಯಾತಿಗೆ ಸೂರ್ಯಕುಮಾರ್ ಯಾದವ್ ಪಾತ್ರರಾಗಿದ್ದಾರೆ.

Suryakumar Yadav, breaking, batting, records,

Articles You Might Like

Share This Article