ಕೊಹ್ಲಿ ದಾಖಲೆ ಮುರಿಯಲು ಹೊರಟ ಸೂರ್ಯಕುಮಾರ್

Social Share

ವೆಲ್ಲಿಂಗ್ಟನ್, ನ. 17- ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ತಂಡದ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರು ವಿರಾಟ್ ಕೊಹ್ಲಿಯ ಮಹತ್ತರ ದಾಖಲೆ ಮುರಿಯುವ ಹೊಸ್ತಿನಲ್ಲಿದ್ದಾರೆ.

2016ರಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ವಿರಾಟ್ ಕೊಹ್ಲಿ ಅವರು ಟಿ 20 ಮಾದರಿಯ ಎಲ್ಲ ಕ್ರಿಕೆಟ್ನಲ್ಲಿ 1614 ರನ್ಗಳನ್ನು ಸಿಡಿಸಿದ್ದರು. ಆ ವರ್ಷದ ಐಪಿಎಲ್ನಲ್ಲಿ 4 ಭರ್ಜರಿ ಶತಕ ಗಳಿಸಿ 147.14 ಸ್ಟೈಕ್ರೇಟ್ನಲ್ಲಿ 89.66 ಸರಾಸರಿಯಲ್ಲಿ 1000 ಸಾವಿರ ರನ್ ಗಳಿಸಿದ್ದರು.

ಭಾರತದ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ ಮಾದರಿಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಈಗಲೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದು, ಈಗ ಆ ದಾಖಲೆ ಮುರಿಯುವ ಅವಕಾಶ ಸೂರ್ಯಕುಮಾರ್ ಅವರಿಗಿದೆ.

ಸೂರ್ಯಕುಮಾರ್ ಯಾದವ್ ಪ್ರಸಕ್ತ ವರ್ಷದಲ್ಲಿ 39 ಪಂದ್ಯಗಳಲ್ಲಿ 173.89 ಸ್ಟೈಕ್ರೇಟ್ನಲ್ಲಿ 43.09ರ ಸರಾಸರಿಯಲ್ಲಿ 1379 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಭರ್ಜರಿ 12 ಅರ್ಧಶತಕಗಳು ಒಳಗೊಂಡಿದೆ.

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು 236 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ 20ಯಲ್ಲಿ ಅತ್ಯಕ ರನ್ ಗಳಿಸಿದ ಆಟಗಾರನಾಗಿ ಸೂರ್ಯಕುಮಾರ್ ಗುರುತಿಸಿಕೊಳ್ಳಲಿದ್ದಾರೆ.

ಉಮೇಶ್ ಕತ್ತಿ, ಆನಂದ ಮಾಮನಿ ಕ್ಷೇತ್ರಗಳಿಗೆ ಅಭ್ಯರ್ಥಿಗಳಿಲ್ಲದೆ ಹೆಣಗಾಡುತ್ತಿರುವ ಬಿಜೆಪಿ

ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ನಲ್ಲಿ ಪೈಪೊೀಟಿಗೆ ಬಿದ್ದಂತೆ ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ ಅವರು 190ರ ಸ್ಟ್ರೈಕ್ ರೇಟ್ನಲ್ಲಿ 239 ರನ್ ಗಳಿಸಿದ್ದರೆ, ವಿರಾಟ್ ಕೊಹ್ಲಿ 98.66 ರ ಸರಾಸರಿಯಲ್ಲಿ 296 ರನ್ ಗಳಿಸಿದ್ದರು.

ವಿರಾಟ್ ಕೊಹ್ಲಿ ಟಿ 20 ವಿಶ್ವಕಪ್ನಲ್ಲಿ 4 ಅರ್ಧಶತಕ ಗಳಿಸಿದ್ದರೆ, ಸೂರ್ಯಕುಮಾರ್ ಯಾದವ್ ಅವರು 3 ಅರ್ಧಶತಕಗಳೊಂದಿಗೆ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರಾದರೂ ಸೆಮಿಫೈನಲ್ ಪಂದ್ಯದಲ್ಲಿ ರನ್ ಗಳಿಸಲು ಎಡವಿದ್ದರಿಂದ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳಿಂದ ಭಾರತ ತಂಡ ಸೋತಿತ್ತು.

#SuryakumarYadav, #Chance, #Breaking, #ViratKohli, #T20Record,

Articles You Might Like

Share This Article