9.4 ಲಕ್ಷ ಮೌಲ್ಯದ ನಾಣ್ಯಗಳು ವಶ

Social Share

ಮುಂಬೈ,ಫೆ.5- ದೆಹಲಿ ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಲಾಡ್ ನಿವಾಸಿಯೊಬ್ಬರ ಒಡೆತನದ ಕಾರಿನಲ್ಲಿ 9.4 ಲಕ್ಷ ಮೌಲ್ಯದ ನಾಣ್ಯಗಳನ್ನು ವಶಪಡಿಸಿಕೊಂಡು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ಹೊಂದಿದ್ದ ಆರೋಪಿಯನ್ನು ಜಿಗ್ನೇಶ್ ಗಾಲಾ ಎಂದು ಗುರುತಿಸಲಾಗಿದೆ.
ಗಾಲಾನಿಂದ ವಶಪಡಿಸಿಕೊಳ್ಳಲಾಗಿರುವ ನಾಣ್ಯಗಳು ಅಸಲಿಯೋ ನಕಲಿಯೋ ಎಂದು ಟಂಕಸಾಲೆಯಿಂದ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ನೋಟು ಪ್ರಕರಣದ ತನಿಖೆ ನಡೆಸುತ್ತಿದ್ದ ದೆಹಲಿ ವಿಶೇಷ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದರೂ ಆ ಸಂದರ್ಭದಲ್ಲಿ ಮಲಾಡ್ ಎಂಬುವರು ನಕಲಿ ನಾಣ್ಯಗಳ ದಂಧೆ ನಡೆಸುತ್ತಿರುವ ಬಗ್ಗೆ ಸುಳಿವು ನೀಡಿದ್ದರೂ ಈ ಸುಳಿವಿನ ಆಧಾರದ ಮೇಲೆ ಈ ದಾಳಿ ಸಂಘಟಿಸಲಾಗಿತ್ತು.

ಹೈದರಾಬಾದ್‌‌ನಲ್ಲಿ ಮೂವರು ಉಗ್ರರನ್ನು ಬಂಧಿಸಿದ ಎನ್‍ಐಎ

ನಕಲಿ ನಾಣ್ಯದ ಪ್ರಕರಣ ಬೆನ್ನತ್ತಿ ಬಂದ ದೆಹಲಿ ಪೊಲೀಸರ ತಂಡ ಮುಂಬೈನ ದಿಂಡೋಶಿ ಪೊಲೀಸರ ಸಂಪರ್ಕದೊಂದಿಗೆ ಕಾರ್ಯಚರಣೆ ನಡೆಸಿ ಗಾಲಾನನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಗಾಲಾ ಕಮಿಷನ್ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಕಳೆದ ಏಳೆಂಟು ವರ್ಷಗಳಿಂದ ನಾಣ್ಯಗಳ ಖರೀದಿ ಮತ್ತು ಪೂರೈಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

Suspected, Counterfeit, Coins, Worth Rs 9.4 Lakh, Seized, Mumbai,

Articles You Might Like

Share This Article