ವಡೋದರಾ,ಮಾ.15-ಎಚ್3ಎನ್2 ಸೋಂಕಿಗೆ ಮತ್ತೆ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ. ಗುಜರಾತ್‍ನ ವಡೋದರಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 58 ವರ್ಷದ ಮಹಿಳೆ ಜ್ವರ ತರಹದ ಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆ ಸಾವಿಗೆ ಎಚ್3ಎನ್2 ಕಾರಣವೇ ಎಂದು ಕೇಳಿದಾಗ, ಆಕೆಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಪರಿಶೀಲನಾ ಸಮಿತಿಯು ಮಹಿಳೆಯ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಾರ್ಚ್ 11 ರಂದು ಸರ್ ಸಯಾಜಿರಾವ್ ಜನರಲ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲು ಮಾಡಲಾಗಿತ್ತು. ಅವರು ಮಾರ್ಚ್ 13 ರಂದು ನಿಧನರಾದರು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನಾವು ಎಲ್ಲಾ ಮಾದರಿಗಳನ್ನು ತೆಗೆದುಕೊಂಡು ಅವುಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಪರಿಶೀಲನಾ ಸಮಿತಿಯು ಮಹಿಳೆಯ ಸಾವಿಗೆ ಕಾರಣವನ್ನು ನಿರ್ಧರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಗುುಜರಾತ್‍ನಲ್ಲಿ ಈ ವರ್ಷ ಇದುವರೆಗೆ ಎಚ್3ಎನ್2 ಸೋಂಕಿನ ಮೂರು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಕಳೆದ ವಾರ ತಿಳಿಸಿದ್ದರು. ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬರು ಎಚ್3ಎನ್2ಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ದೇಶದಲ್ಲಿ ಪ್ರತಿನಿತ್ಯ ಎಚ್3ಎನ್2 ಸೋಂಕು ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Suspected, H3N2, death, Vadodara,