ಬೆಂಗಳೂರು, ಜು.25-ನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರನೊಬ್ಬನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಲಕ್ ನಗರದಲ್ಲಿ ನೆಲೆಸಿದ್ದ ಅಸ್ಸಾಂ ಮೂಲದ ಅಖ್ತರ ಹುಸೇನ್ ಲಫ್ಕರ ಬಂಧಿತ ಶಂಕಿತ ಉಗ್ರ.
ತಿಲಕ ನಗರದ ಬಹು ಮಹಡಿ ಕಟ್ಟಡವೊಂದರ ಮೂರನೇ ಮಹಡಿ ಮನೆಯಲ್ಲಿ ಶಂಕಿತ ಉಗ್ರ ವಾಸವಾಗಿದ್ದಾನೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.
ತಕ್ಷಣ 30ಕ್ಕೂ ಹೆಚ್ಚು ಪೊಲೀಸರು ತಡರಾತ್ರಿ ಈ ಮನೆ ಬಳಿ ಜಮಾಯಿಸಿ ಮನೆ ಮೇಲೆ ದಾಳಿ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. ಆಹಾರ ಡೆಲಿವರಿ ಬಾಯ್ ಜೊತೆ ಈತ ವಾಸವಾಗಿದ್ದನು.
ಕಳೆದೊಂದು ವರ್ಷದಿಂದ ಅಲ್‍ಖೈದಾ ಸಂಘಟನೆ ಜೊತೆ ನಿರಂತರ ಸಂಪರ್ಕ ಹೊಂದಿದ್ದನು. ಅಲ್ಲದೆ ಟೆಲಿಗ್ರಾಂ ಹಾಗೂ ಫೇಸ್‍ಬುಕ್ ಮೂಲಕ ಸಂಪರ್ಕ ಸಾಸಿರುವುದು ಬೆಳಕಿಗೆ ಬಂದಿದೆ.