ಗಿರಿಧ್, ಜ.27- ಜಾರ್ಖಂಡ್‍ನ ಗಿರಿಧ್ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಶಂಕಿತ ಸದಸ್ಯರು ರೈಲ್ವೆ ಹಳಿಯ ಒಂದು ಭಾಗವನ್ನು ಇಂದು ಮುಂಜಾನೆ ಸೋಟಿಸಿದ್ದಾರೆ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ. ಸ್ಫೋಟದ ನಂತರ ಹೌರಾ-ನವದೆಹಲಿ ಮಾರ್ಗದ ರೈಲು ಸೇವೆಗಳಿಗೆ ಸುಮಾರು ಆರು ಗಂಟೆಗಳ ಕಾಲ ಅಡಚಣೆ ಉಂಟಾಯಿತು ಎಂದು ಆರ್‍ಪಿಎಫ್ ಸೀನಿಯರ್ ಕಮಾಂಡೆಂಟ್ ಹೇಮಂತ್‍ಕುಮಾರ್ ಹೇಳಿದರು.
ಈ ಎರಡು ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಮಧ್ಯರಾತ್ರಿ 12.30ಕ್ಕೆ ಸ್ಥಗಿತಗೊಳಿಸಲಾಯಿತು ಮತ್ತು ಸುಮಾರು 6.30ರ ಹೊತ್ತಿಗೆ ಪುನರಾರಂಭಿಸಲಾಯಿತು ಎಂದು ಅವರು ನುಡಿದರು. ನಿಷೇತ ಸಂಘಟನೆಯು ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ತನ್ನ ಉನ್ನತ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ರಾ ಅವರನ್ನು ಜಾರ್ಖಂಡ್ ಪೊಲೀಸರು ಬಂಧಿಸಿರುವುದನ್ನು ಪ್ರತಿಭಟಿಸಿ 24 ಗಂಟೆಗಳ ಜಾರ್ಖಂಡ್ ಬಂದ್‍ಗೆ ಕರೆ ನೀಡಿತ್ತು.
ಬೋಸ್ ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‍ಗಢ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ನೂರಕ್ಕೂ ಅಧಿಕ ದಾಳಿ ಮತ್ತು ದೊಂಬಿಯ ರೂವಾರಿ ಎಂದು ಹೇಳಲಾಗಿದೆ.
