ಅಗಲಿದ ಗಣ್ಯರಿಗೆ ಮೇಲ್ಮನೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

Social Share

ಬೆಳಗಾವಿ,(ಸುವರ್ಣ ಸೌಧ)ಡಿ.19- ವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ಶಾಸಕ ಆನಂದ ಮಾಮನಿ ಸೇರಿದಂತೆ ಇತ್ತೀಚೆಗೆ ಅಗಲಿದ ಹನ್ನೊಂದು ಮಂದಿ ಗಣ್ಯರಿಗೆ ವಿಧಾನ ಪರಿಷತ್ತಿನಲ್ಲಿಂದು ಭಾವ ಪೂರ್ಣ ಸಂತಾಪ ಸೂಚಿಸಲಾಯಿತು.

ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ವಂದೇ ಮಾತರಂ ಗೀತೆಯೊಂದಿಗೆ ಸದನ ಸಮಾವೇಶಗೊಂಡಾಗ ಸಭಾಪತಿ ರಘನಾಥರಾವ್ ಮಲ್ಕಾಪುರೆ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿದರು.

ಇತ್ತೀಚೆಗೆ ನಿಧನರಾದ ಉಪ ಸಭಾಧ್ಯಕ್ಷರಾಗಿದ್ದ ವಿಧಾನಸಭೆ ಸದಸ್ಯ ಆನಂದ ಮಾಮನಿ, ಮಾಜಿ ಸಚಿವರಾದ ಜಬ್ಬಾರ್ ಖಾನ್ ಹೊನ್ನಳ್ಳಿ, ಸುೀಂದ್ರರಾವ್ ಕಸಬೆ, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಎಸ್.ಎಸ್.ಪೂಜಾರಿ, ಲೋಕಸಭೆ ಮಾಜಿ ಸದಸ್ಯ ಕೋಳೂರು ಬಸವನಗೌಡ, ರಾಜ್ಯಸಭೆ ಮಾಜಿ ಸದಸ್ಯ ಅಬ್ದುಲ್ ಸಮದ್ ಸಿದ್ಧಿಕಿ, ಸಿನಿಮಾ ನಟ ಲೋಹಿತಾಶ್ವ, ಯಕ್ಷಗಾನ ಕಲಾವಿದ ಬಂಗಾರ್ ಆಚಾರ್, ಕೆರೆ ನಿರ್ಮಾತೃ ಕಲ್ಮನೆ ಕಾಮೇಗೌಡ ಹಾಗೂ ವೇದಾಂತ ವಿದ್ವಾನ್ ಆರ್.ಎಲ್.ಕಶ್ಯಪ್ಪ ಅವರು ನಿಧನವಾಗಿರುವುದನ್ನು ಸದನಕ್ಕೆ ತಿಳಿಸಿ ವಿಷಾಸಿದರು.

BIG BREAKING : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಸಭಾಪತಿ ಅವರು ಅಗಲಿದ ಗಣ್ಯರ ಗುಣಗಾನ ಮಾಡಿದರು. ಸಭಾನಾಯಕರಾದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಭಾಪತಿ ಮಂಡಿಸಿದ ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡುತ್ತಾ, ಆನಂದ ಮಾಮನಿ ಅವರು ಹತ್ತಿ ವ್ಯಾಪಾರದಿಂದ ವಿಧಾನಸಭೆಗೆ ಬಂದಿದ್ದರು. ಅವರು ನಡೆದ ಬಂದ ಹಾದಿ ಸ್ಪೂರ್ತಿದಾಯಕ. ಅವರು ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಕಾಳಜಿ ಹೊಂದಿದ್ದರು ಎಂದು ಹೇಳಿದರು.

ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು. ಆಧುನಿಕ ಭಗೀರಥರೆಂದೇ ಪರಿಚಿತರಾಗಿದ್ದ ಕಲ್ಮನೆ ಕಾಮೇಗೌಡರು ಸಾಮಾನ್ಯರಂತೆ ಇದ್ದರೂ, ಹಲವು ಕೆರೆಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಇವರ ಸಾಧನೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಮನ್ ಕೀ ಬಾತ್‍ನಲ್ಲಿ ಶ್ಲಾಘಿಸಿದ್ದರು ಎಂದರು. ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ಕೆ ರಾಥೋಡ್ ಮಾತನಾಡಿ, ಜಬ್ಬಾರ್ ಖಾನ್ ಹೊನ್ನಳ್ಳಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಆ ಭಾಗದ ಜನರು ಈಗಲೂ ಅವರ ಸಾಧನೆ, ಕಾರ್ಯ ವೈಖರಿ ಸ್ಮರಿಸುತ್ತಾರೆ ಎಂದು ನುಡಿದರು.

ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ; ಠಾಕೂರ್

ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಆನಂದ ಮಾಮನಿ ಅವರು, ಸಣ್ಣ ವಯಸ್ಸಿನಲ್ಲಿಯೇ ಕ್ಯಾನ್ಸರ್ ರೋಗಗಕ್ಕೆ ಸಿಲುಕಿದರೂ ಯಾರಿಗೂ ತಮ್ಮ ನೋವು ಹೇಳಿಕೊಳ್ಳುತ್ತಿರಲಿಲ್ಲ. ಮಾಮನಿ ನಿಧನದಿಂದ ಇಡೀ ರಾಜ್ಯಕ್ಕೆ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸದಸ್ಯ ರವಿಕುಮಾರ್ ಮಾತನಾಡಿ, ಕಾಮೇಗೌಡ ಅವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಾಗ ಮಾತ್ರ ನನಗೆ ತಿಳಿಯಿತು. ಆನಂತರ, ಅವರ ಮನೆಗೆ ಭೇಟಿ ನೀಡಿದಾಗ ಅವರ ಸಾಧನೆ ನಮ್ಮನ್ನೇ ಬೆರಗುಗೊಳಿಸಿತು ಎಂದು ತಿಳಿಸಿದರು.

ಸದಸ್ಯರಾದ ಡಾ.ತೇಜಸ್ವಿನಿಗೌಡ, ಎಸ್.ವಿ.ಸಂಕನೂರು, ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಅವರು ಅಗಲಿದ ಗಣ್ಯರ ಗುಣಗಾನ ಮಾಡಿದರು. ಬಳಿಕ ಸಭಾಪತಿ ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬವರ್ಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸಿದರು.

ಸದನದಲ್ಲಿ ಒಂದು ನಿಮಿಷ ಮËನ ಆಚರಿಸಿದ ನಂತರ ಸಭಾಪತಿ ಸದನದ ಕಾರ್ಯ ಕಲಾಪಗಳನ್ನು ನಾಳೆಗೆ ಮುಂದೂಡಿದರು.

Articles You Might Like

Share This Article