ಬೆಳಗಾವಿ, ಡಿ.23- ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೋವಿಡ್ ಕಾಣಿಸಿಕೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲ ಕರ್ತವ್ಯನಿರತ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಕಾರ್ಯಗಳಲ್ಲಿ ನಿರತ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಹೀಗಾಗಿ ಸುವರ್ಣ ವಿಧಾನಸೌಧ ಸಿಬ್ಬಂದಿ, ಪೊಲೀಸರು, ತಪಾಸಣೆ ಸಿಬ್ಬಂದಿ ಸೇರಿದಂತೆ ಹಲವರು ಮತ್ತೆ ಮಾಸ್ಕ್ ಧರಿಸಿರುವುದು, ಸ್ಯಾನಿಟೈಸರ್ ಬಳಕೆ ಕಂಡು ಬಂತು.
ಬೆಂಗಳೂರು ವಿವಿ ಆವರಣದಲ್ಲಿ ಮಾಸ್ಕ್ ಕಡ್ಡಾಯ
ಉಭಯ ಸದನಗಳ ಕಲಾಪ ಆರಂಭಕ್ಕೂ ಮುನ್ನ ಕೆಲ ಅಕಾರಿಗಳ ಕಚೇರಿ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಕೆಲವು ಶಾಸಕರು ಸಹ ಮಾಸ್ಕ್ ಧರಿಸಿರುವ ದೃಶ್ಯ ಕಂಡಿತು. ಆದರೆ ಎಲ್ಲರೂ ಮಾಸ್ಕ್ ಧರಿಸಿರಲಿಲ್ಲ.
ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಯಾವುದೇ ಅಕೃತ ಸೂಚನೆ ನೀಡಿಲ್ಲ. ಆದರೆ ಧರಿಸಿ ಬಂದರೆ ಒಳ್ಳೆಯದು ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂತು.
#SuvarnaVidhanaSoudha, #Belgaum, #MaskMandatory, #coronavirus,