ಅಧಿವೇಶನ ಆರಂಭವಾಗಿ ವಾರಕಳೆದರೂ ನಿಲ್ಲದ ಸಾಲು ಸಾಲು ಪ್ರತಿಭಟನೆಗಳು

Social Share

ಬೆಳಗಾವಿ, ಡಿ.26- ಚಳಿಗಾಲದ ಅಧಿವೇಶನ ಆರಂಭವಾಗಿ ವಾರ ಕಳೆದರೂ ಪ್ರತಿಭಟನೆಗಳು ಮಾತ್ರ ನಿಂತಿಲ್ಲ. ಇಂದೂ ಸಹ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಸಾಲುಸಾಲು ಪ್ರತಿಭಟನೆಗಳು ನಡೆದಿವೆ.

ಸುವರ್ಣಸೌಧ ಬಳಿಯ ಬಸ್ತವಾಡ ಹಾಗೂ ಕೊಂಡಸಕಪ್ಪದ ಪ್ರತಿಭಟನಾ ಟೆಂಟ್‍ನಲ್ಲಿ ವಿವಿಧ ಸಂಘಟನೆಗಳಿಂದ ಧರಣಿ ನಡೆಸಲಾಯಿತು. ಕೆಲವು ಸಂಘಟನೆಗಳಿಂದ ತಮ್ಮ ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅರಣ್ಯ ಒತ್ತುವರಿ ಸಾಗುವಳಿದಾರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು. ರೈತ, ಕಾರ್ಮಿಕ, ಮಹಿಳಾ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಆಗ್ರಹಿಸಿ ಧಾರವಾಡ ಹಿರಿಯ ನಾಗರಿಕರ ಒಕ್ಕೂಟದ ವತಿಯಿಂದ ಹೋರಾಟ ನಡೆಸಲಾಗಿದೆ. ಹೊರಗುತ್ತಿಗೆ ಕಾರ್ಮಿಕರ ಸೇವೆ ಮುಂದುವರಿಸಿ, ಸೇವಾ ಭದ್ರತೆ, ಕನಿಷ್ಠ ವೇತನ ನೀಡಲು ಆಗ್ರಹಿಸಲಾಯಿತು. ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಕಾಲೇಜುಗಳ ಕಾರ್ಮಿಕ ಸಂಘದಿಂದ ಪ್ರತಿಭಟನೆ.

ಚೀನಾದಿಂದ ಬಂದ ಆಗ್ರಾ ಮೂಲದ ವ್ಯಕ್ತಿಯಲ್ಲಿ ಬಿಎಫ್.7 ವೈರಸ್ ಲಕ್ಷಣ ಪತ್ತೆ

ಪ್ರಥಮ ಚಿಕಿತ್ಸಾ ಪರಿಣಿತರ ಮೇಲೆ ಮಾಧ್ಯಮಗಳ ಕಿರುಕುಳ ತಪ್ಪಿಸಲು ಒತ್ತಾಯಿಸಿ ರಾಜ್ಯ ವೈದ್ಯಕೀಯ ಪ್ರಥಮ ಚಿಕಿತ್ಸಾ ಪರಿಣಿತರ ಸಂಘದಿಂದ ಧರಣಿ ನಡೆಸಲಾಯಿತು. ವಸತಿಶಾಲೆ, ವಸತಿನಿಲಯಗಳಲ್ಲಿ ನೌಕರರ ಸೇವಾಭದ್ರತೆ ನೀಡಲು ಆಗ್ರಹಿಸಿ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ.

ಬಿಸಿಯೂಟ ಕಾರ್ಯಕರ್ತರ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಧರಣಿ ನಡೆಸಲಾಯಿತು..

ಚಿಕ್ಕೋಡಿಯನ್ನು ಜಿಲ್ಲೆ ಮಾಡುವಂತೆ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಪ್ರತಿಭಟನೆ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಪತ್ತಿನ ಸಹಕಾರಿ ಬ್ಯಾಂಕುಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಧರಣಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ನಿಶ್ಚಿತ ಪಿಂಚಣಿ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಪಿಂಚಣಿ ವಂಚಿತ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ತಮಿಳುನಾಡಿನ ಕರಾವಳಿಯಲ್ಲಿ ಚಂಡಮಾರುತ ಎಚ್ಚರಿಕೆ ಕೇಜ್ ಅಳವಡಿಕೆ

ಕೆಹೆಚ್‍ಬಿ ಕಾಲೋನಿಯಿಂದ ಬೆಳಗಾವಿ ನಗರಕ್ಕೆ ನೇರ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಬಸವನ ಕುಡಚಿ ಕೆಹೆಚ್‍ಬಿ ಲೇಔಟ್ ನಿವಾಸಿಗಳಿಂದ ಪ್ರತಿಭಟನೆ. ಹೀಗೆ ವಿವಿಧ ಸಂಘಟನೆಗಳಿಂದ ಧರಣಿ, ಪ್ರತಿಭಟನೆ, ಮನವಿ ಸಲ್ಲಿಸುವ ಮೂಲಕ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.

Suvarna Vidhana Soudha, Belgaum, protests,

Articles You Might Like

Share This Article