2006ರಿಂದ ಬೆಳಗಾವಿಯಲ್ಲಿ ಈವರೆಗೆ 100 ದಿನ ನಡೆದ ಅಧಿವೇಶನ

Social Share

ಬೆಳಗಾವಿ, ಡಿ.22- ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಅಧಿವೇಶನವು ನೂರು ದಿನಗಳನ್ನು ಪೂರ್ಣಗೊಳಿಸಿದೆ. ಕಳೆದ 2006ರಲ್ಲಿ ಪ್ರಾರಂಭವಾದ ಬೆಳಗಾವಿಯ ಅಧಿವೇಶನವು ಇಂದಿನವರೆಗೆ ನೂರು ದಿನಗಳನ್ನು ಪೂರ್ಣಗೊಳಿಸಿದೆ. ಶತಕದ ದಾಖಲೆಯಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಪ್ರಾರಂಭಿಸಲಾಯಿತು.

12ನೆ ವಿಧಾನಸಭೆಯ ನಾಲ್ಕನೆ ಅಧಿವೇಶನವು 2006ರ ಸೆಪ್ಟಂಬರ್ 25ರಿಂದ 29ರವರೆಗೆ ಕೆಎಲ ಇ ಸಂಸ್ಥೆಯಲ್ಲಿ ಐದು ದಿನಗಳ ಕಾಲ ನಡೆದಿತ್ತು. ಇದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಉಭಯ ಸದನಗಳ ಚೊಚ್ಚಲ ಅಧಿವೇಶನವಾಗಿತ್ತು.

ಬಳಿಕ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಎರಡನೆ ಅಧಿವೇಶನ ನಡೆಸಲಾಯಿತು. 13ನೇ ವಿಧಾನಸಭೆಯ ಎರಡನೆಯ ಅಧಿವೇಶನವು 2009ರ ಜನವರಿ 16ರಿಂದ 24ರವರೆಗೆ ಒಟ್ಟು ಎಂಟು ದಿನಗಳ ಕಾಲ ನಡೆದಿತ್ತು. ಇದರ ಮುಂದುವರೆದ ಅಧಿವೇಶನವು ಮತ್ತೆ ಫೆಬ್ರವರಿ 19ರಿಂದ 27ರ ವರೆಗೆ ಆರು ದಿನಗಳ ಕಾಲ ನಡೆದಿತ್ತು.

ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾದ ನಂತರ 15ನೇ ಅವೇಶನವು 2012ರ ಡಿಸೆಂಬರ್ 5ರಿಂದ 13ರವರೆಗೆ ಏಳು ದಿನಗಳ ಕಾಲ ನಡೆದಿದೆ. ಇದು ಸುವರ್ಣ ವಿಧಾನಸೌಧದಲ್ಲಿ ನಡೆದ ಮೊದಲ ಅಧಿವೇಶನವಾಗಿದೆ. ಆಗ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು.

ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ : ಸಚಿವ ಸೋಮಣ್ಣ

ಬಳಿಕ 2013ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಸುವರ್ಣವಿಧಾನಸೌಧದಲ್ಲಿ 14ನೇ ವಿಧಾನಸಭೆಯ ಎರಡನೆಯ ಅಧಿವೇಶನವು ನವೆಂಬರ್ 25ರಿಂದ ಡಿಸೆಂಬರ್ 6ರ ವರೆಗೆ 10 ದಿನಗಳ ಕಾಲ ಹಾಗೂ ಐದನೆ ಅಧಿವೇಶನವನ್ನು 2014ರ ಡಿಸೆಂಬರ್ 9 ರಿಂದ 20ರವರೆಗೆ ಹತ್ತು ದಿನಗಳ ಕಾಲ ನಡೆಸಲಾಗಿತ್ತು.

ಕಳೆದ 2013ರಿಂದಲೂ ನಿರಂತರವಾಗಿ ಹತ್ತು ದಿನಗಳ ಕಾಲ ಪ್ರತಿ ವರ್ಷ ಅವೇಶನ ನಡೆಸುವ ಸಂಪ್ರದಾಯ ಮುಂದುವರೆದಿದೆ. ಕಳೆದ 2015ರಲ್ಲಿ ಎಂಟನೆಯ ಅವೇಶನವು ಜೂನ್ 29ರಿಂದ ಜುಲೈ 10ರ ವರೆಗೆ ಹತ್ತುದಿನಗಳ ಕಾಲ ಹಾಗೂ 2016ರಲ್ಲಿ 12ನೆಯ ಅವೇಶನವು ನವೆಂಬರ್ 21ರಿಂದ ಡಿಸೆಂಬರ್ 3ರವರೆಗೆ 10 ದಿನಗಳ ಕಾಲ ನಡೆಯಿತು.

2017ರಲ್ಲಿ 15ನೇ ಅಧಿವೇಶನವು ನವೆಂಬರ್ 13ರಿಂದ 24ರವರೆಗೆ 10 ದಿನಗಳ ಕಾಲ ನಡೆಯಿತು. ಮತ್ತೆ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಕಾರಕ್ಕೆ ಬಂದ ಮೇಲೆ 2018ರಲ್ಲಿ 15ನೇ ವಿಧಾನಸಭೆಯ ಎರಡನೇ ಅಧಿವೇಶನವು ಡಿಸೆಂಬರ್ 10 ರಿಂದ 21ರ ವರೆಗೆ 10ದಿನಗಳ ಕಾಲ ನಡೆಸಲಾಗಿದೆ. ಬಳಿಕ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 11ನೆ ಅಧಿವೇಶನವು ಡಿಸೆಂಬರ್ 13ರಿಂದ 24ರವರೆಗೆ ನಡೆದಿದೆ.

ಕಳೆದ ವರ್ಷದ ವೇಳೆಗೆ 96 ದಿನಗಳ ಕಾಲ ಬೆಳಗಾವಿಯಲ್ಲಿ ಅವೇಶನ ನಡೆಸಲಾಗಿತ್ತು. ಕೆಎಲ್‍ಇ ಸಂಸ್ಥೆಯಲ್ಲಿ ಒಟ್ಟು 19 ದಿನಗಳ ಕಾಲ ನಡೆಸಲಾಗಿದ್ದು, ಸುವರ್ಣ ವಿಧಾನಸೌಧದಲ್ಲಿ ಇದುವರೆಗೂ ಒಟ್ಟು 81 ದಿನಗಳ ಕಾಲ ನಡೆದಿದೆ. ನಿರೀಕ್ಷೆಯಂತೆ ಇನ್ನೂ 6 ದಿನಗಳ ಕಾಲ ಅಧಿವೇಶನ ನಡೆದರೆ 87 ದಿನಗಳ ಕಾಲ ಪೂರ್ಣಗೊಳಿಸಿದಂತಾಗಲಿದೆ.

ಪ್ರಸ್ತುತ ಚಳಿಗಾಲದ ಅಧಿವೇಶನವು ಡಿಸೆಂಬರ್ 19ರಿಂದ ಆರಂಭವಾಗಿದ್ದು, ಡಿ.30ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ವಿಧಾನಸಭೆ ಸಚಿವಾಲಯದ ಮಾಹಿತಿ ಪ್ರಕಾರ ಇಂದಿಗೆ ನೂರು ದಿನಗಳ ಅಧಿವೇಶನ ಪೂರ್ಣಗೊಂಡಿದ್ದು, ಇನ್ನೂ 6 ದಿನಗಳ ಕಾಲ ಅಧಿವೇಶನ ನಡೆಯಬೇಕಿದೆ. ಆಗ 106 ದಿನ ಅಧಿವೇಶನ ನಡೆದಂತಾಗಲಿದೆ.

ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು

ಬೆಳಗಾವಿ ಅಧಿವೇಶನವು ಚಳಿಗಾಲದ ಅಧಿವೇಶನಕ್ಕೆ ಸೀಮಿತಗೊಂಡಿದೆ. ಯಾವ ಮಹತ್ವದ ಉದ್ದೇಶದಿಂದ ಅಧಿವೇಶನ ನಡೆಸಲು ಆರಂಭಿಸಲಾಯಿತೋ ಆ ಉದ್ದೇಶ ಇದುವರೆಗೆ ಈಡೇರಿಲ್ಲ ಎಂಬ ಕೂಗು ಮಾತ್ರ ನಿಂತಿಲ್ಲ. ಭವ್ಯವಾದ ಸುವರ್ಣ ವಿಧಾನಸೌಧವನ್ನು ನಿರ್ಮಿಸಿದ್ದರೂ ರಾಜಧಾನಿಯಿಂದ ಕೆಲವು ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂಬ ಬೇಡಿಕೆಯು ಇದುವರೆಗೆ ಈಡೇರಿಲ್ಲ. ಉತ್ತರ ಕರ್ನಾಟಕದ ಬಹಳಷ್ಟು ಸಮಸ್ಯೆಗಳು ಬಗೆಹರಿದಿಲ್ಲ. ಪ್ರತಿಭಟನೆಗಳು ನಿಂತಿಲ್ಲ.

ಅಧಿವೇಶನ ನಡೆಸಲು ಪ್ರಾರಂಭಿಸಿ ಹದಿನಾರು ವರ್ಷಗಳಾಯಿತು. ಈ ಭಾಗದ ಜನರ ಆಶೋತ್ತರಗಳು ಮಾತ್ರ ಈಡೇರಿಲ್ಲ. ಹೀಗಾಗಿ ಪ್ರತಿ ವರ್ಷ ಮಾತ್ರ 10 ದಿನಗಳ ಕಾಲ ಸಂಪ್ರದಾಯದಂತೆ ಅಧಿವೇಶನ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

suvarna vidhana soudha, belgaum Session, 100 days,

Articles You Might Like

Share This Article