ಬೆಳಗಾವಿ, ಡಿ.26-ಮಹಾಮಾರಿ ಕೋವಿಡ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ತಡೆಗಟ್ಟುವ ಚಟುವಟಿಕೆಗಳು ಬೀರಿಸುಗೊಂಡಿವೆ. ಕಳೆದೊಂದು ವಾರದಿಂದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ಇಂದಿನಿಂದ ಆರಂಭಿಸಲಾಗಿದೆ.
ಸುವರ್ಣಸೌಧದ ಪೂರ್ವದ್ವಾರ, ವಿಧಾನಸಭೆ ಮತ್ತು ವಿಧಾನಪರಿಷತ್ ಮೊಗಸಾಲೆಯಲ್ಲಿ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ವಿಧಾನಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಪ್ರಕಟಿಸಿದ್ದಂತೆ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಶಾಸಕರು, ಅಧಿಕಾರಿಗಳು, ಇತರೆ ಸಿಬ್ಬಂದಿ ಮತ್ತು ಮಾಧ್ಯಮವರಿಗೂ ಉಚಿತವಾಗಿ ಲಸಿಕೆ ಪಡೆದುಕೊಳ್ಳಬಹುದು.
ರೆಡ್ಡಿ ಹೊಸ ಪಕ್ಷ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ : ಶ್ರೀರಾಮುಲು
ಮತ್ತೊಂದೆಡೆ ಮಾಸ್ಕ್ ಕಡ್ಡಾಯಗೊಳಿಸಿ ಬೆಳಗಾವಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದರಿಂದ ಪೊಲೀಸ್ ಸಿಬ್ಬಂದಿ, ಮಾರ್ಷಲ್, ಪತ್ರಕರ್ತರು ಸೇರಿದಂತೆ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು.
ಔಟ್ಪೋಸ್ಟ್ ನಲ್ಲಿ ಲಂಚ ಪಡೆಯುತ್ತಿದ್ದ ಕಾನ್ಸ್ಟೆಬಲ್ ಅಮಾನತು
ಬಳಿಕ ಸುವರ್ಣವಿಧಾನಸೌಧದಲ್ಲಿ ಮಾಸ್ಕ್ ಧರಿಸುವಂತೆ ಸಿಬ್ಬಂದಿ ಮನವಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡಿತು. ಮುಖ್ಯ ದ್ವಾರಗಳಲ್ಲಿ ನಿಂತಿದ್ದ ತಪಾಸಣಾ ಸಿಬ್ಬಂದಿ ಸಹ ಮಾಸ್ಕ್ ಧರಿಸುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದ್ದರು. ಮಾಸ್ಕ್ ಇಲ್ಲದವರಿಗೆ ಧರಿಸಿ ಬನ್ನಿ ಎಂದು ಸಲಹೆ ಮಾಡುತ್ತಿದ್ದರು.
#SuvarnaVidhanaSoudha,#CovidVaccinationCenter, #Belagavi