ಸ್ವೀಡನ್ ವಾಯು ಗಡಿಗೆ ನುಗ್ಗಿದ ರಷ್ಯಾ ವಿಮಾನಗಳು

Spread the love

ಸ್ಟಾಕ್ಹೋಮ್, ಮೇ 1- ರಷ್ಯಾದ ಮಿಲಿಟರಿ ವಿಮಾನವು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಸ್ವೀಡನ್ ಆರೋಪಿಸಿದೆ. ಬೋನ್ರ್ಹೋಮ್ ದ್ವೀಪದ ಬಳಿಯ ಬಾಲ್ಟಿಕ್ ಸಮುದ್ರದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಶನಿವಾರ ಹೊರಡಿಸಿದ ಹೇಳಿಕೆಯಲ್ಲಿ, ಸ್ವೀಡಿಷ್ ಸಶಸ್ತ್ರ ಪಡೆಗಳು ರಷ್ಯಾದ ಎಎನ್ -30 ಪ್ರೊಪೆಲ್ಲರ್ ವಿಮಾನವು ಸ್ವೀಡಿಷ್ ವಾಯುಪ್ರದೇಶದತ್ತ ಹಾರಿದೆ, ಪ್ರದೇಶವನ್ನು ತೊರೆಯುವ ಮೊದಲು ಸಂಕ್ಷಿಪ್ತವಾಗಿ ಸೀಮಾರೇಖೆಯನ್ನು ಉಲ್ಲಂಘಿಸಿದೆ ಎಂದು ಹೇಳಲಾಗಿದೆ.

ಸ್ವೀಡಿಷ್ ರಕ್ಷಣಾ ಸಚಿವ ಪೀಟರ್ ಹಲ್ಟಿಕ್ವಿಸ್ಟ್ ಅವರು ಸ್ವೀಡಿಷ್‍ನ ಸಾರ್ವಜನಿಕ ರೇಡಿಯೊಗೆ ನೀಡಿರುವ ಸಂದರ್ಶನದಲ್ಲಿ ರಷ್ಯಾ ಮಾಡಿರುವ ಸೀಮಾರೇಖೆ ಉಲ್ಲಂಘನೆ ಸ್ವೀಕಾರಾರ್ಹವಲ್ಲ ಮತ್ತು ವೃತ್ತಿಪರವಲ್ಲದ ಎಂದು ಆಕ್ಷೇಪಿಸಿದ್ದಾರೆ. ಮಾರ್ಚ್ ಆರಂಭದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ನಾಲ್ಕು ರಷ್ಯಾದ ಯುದ್ಧವಿಮಾನಗಳು ಬಾಲ್ಟಿಕ್ ಸಮುದ್ರದ ಮೇಲೆ ಸ್ವೀಡಿಷ್ ವಾಯುಪ್ರದೇಶ ಉಲ್ಲಂಘಿಸಿದವು ಎಂದಿದ್ದಾರೆ.

ಉಕ್ರೇನ್ ಮೇಲೆ ಆಕ್ರಮಣ ಮುಂದುವರೆಸಿರುವ ರಷ್ಯಾ, ಸ್ವೀಡನ್ ಮತ್ತು ನೆರೆಯ ಫಿನ್ಲ್ಯಾಂಡ್ ಎರಡೂ ನ್ಯಾಟೋ ಸದಸ್ಯತ್ವವನ್ನು ಪರಿಗಣಿಸುತ್ತಿವೆ. ಇದು ಸ್ಥಿರತೆಯ ಬದಲು ಬೇರೆ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಮಾಸ್ಕೋ ಎಚ್ಚರಿಸಿದೆ.

Facebook Comments