ಸಿಡ್ನಿ.ಫೆ.17- ಆಸ್ಟ್ರೇಲಿಯಾದ ಐಕಾನಿಕ್ ಬೋಂಡಿ ಮತ್ತು ಬ್ರಾಂಟೆ ಸೇರಿದಂತೆ ಸಿಡ್ನಿಯ ಹಲವಾರು ಕಡಲತೀರಗಳನ್ನು ಶಾರ್ಕ್ ದಾಳಿಯಲ್ಲಿ ಈಜುಗಾರ ಸಾವನ್ನಪ್ಪಿದ ನಂತರ ಜನರು ಬಾರದಂತೆ ಎಚ್ಚರಿಕೆ ನೀಡಿ ಇಂದು ಮುಚ್ಚಲಾಯಿತು. ಸುಮಾರು 60 ವರ್ಷಗಳಲ್ಲಿ ಇಲ್ಲಿ ಕಡಲತೀರಗಳಲ್ಲಿ ಶಾರ್ಕ್ ದಾಳಿಸಂಭವಿಸಿದ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾರ್ಕ್‍ಗಳು ಇನ್ನೂ ತೀರದ ಹತ್ತಿರದ ಪ್ರದೇಶದಲ್ಲಿದೆಯೇ ಎಂದು ಅಧಿಕಾರಿಗಳು ಡ್ರೋನಳನ್ನು ಬಳಸಲಾಗುತ್ತದೆ ಸಿಡ್ನಿ ನಗರದಿಂದ ದಕ್ಷಿಣಕ್ಕೆ 20 ಕಿಮೀ ದೂರದ ಮತ್ತು ಬಾಟನಿ ಕೊಲ್ಲಿಯ ಲಿಟಲ್ ಬೇ ಬೀಚ್‍ನಲ್ಲಿ ಬುಧವಾರ ಮಧ್ಯಾಹ್ನ ವ್ಯಕ್ತಿಯ ಮೇಲೆ ಶಾರ್ಕ್ ದಾಳಿ ಮಾಡುವುದನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡಿದ್ದಾರೆ. ಆದರೆ ಮೃತನ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಈ ದುರಂತದಿಂದ ತೀವ್ರ ಆಘಾತವಾಗಿದೆ ಎಂದು ರಾಂಡ್ವಿಕ್ ಕೌನ್ಸಿಲ್ ಮೇಯರ್ ಡೈಲನ್ ಪಾಕರ್ ರಾಯಿಟಸರ್ ತಿಳಿಸಿದ್ದಾರೆ . ಸಾಮಾನ್ಯವಾಗಿ ನೆರೆಯ ಕಡಲತೀರದಲ್ಲಿ ಸಾವಿರಾರು ಜನರು ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜುತಾರೆ.ಈಗ ಇಲ್ಲಿ ವಾರ್ಷಿಕ ಕಾರ್ಯಕ್ರಮ ನಡೆಯಬೇಕಾಗಿತ್ತು. ನಾವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಮತ್ತು ಕಾರ್ಯಕ್ರಮವನ್ನು ಮುಂದೂಡಿ ಮಾರ್ಚ್ 6 ರಂದು ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
