ಚುಟುಕು ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್, ಪೆನಾಲ್ಟಿಯಲ್ಲಿ ಬದಲಾವಣೆ ತಂದ ಐಸಿಸಿ

Social Share

ನವದೆಹಲಿ, ಜ.7 – ಟ್ವೆಂಟಿ-20 ಪಂದ್ಯಗಳಲ್ಲಿ ನಿಧಾನ ಗತಿಯ ಶಿಕ್ಷೆಯ ವೇಳೆ ಅನುಸರಿಸುವ ಕ್ರಮಗಳು, ಪಂದ್ಯದ ನಡುವೆ ನೀಡುವ ಡ್ರಿಂಕ್ಸ್‍ಗೆ ಸಂಬಂಧಿಸಿದಂತೆ ಇಂದು ನಡೆದ ಐಸಿಸಿ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. ಚುಟುಕು ಪಂದ್ಯಾವಳಿಯ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದರೆ ಆರ್ಟಿಕಲ್ 2.22ರಲ್ಲಿ ಆಟಗಾರ ಹಾಗೂ ಆತನ ಸಹ ಆಟಗಾರರನಿಗೆ ಐಸಿಸಿ ನಿಯಮದ ಪ್ರಕಾರ ದಂಡವನ್ನು ವಿಧಿಸಲಾಗುತ್ತಿದೆ.
ಆದರೆ ಇಂದು ನಡೆದ ಸಭೆಯಲ್ಲಿ ಟ್ವೆಂಟಿ-20 ಪಂದ್ಯಗಳಲ್ಲಿ ನಿಧಾನಗತಿಯ ಬೌಲಿಂಗ್ ಮಾಡುವಾಗ ಕ್ಷೇತ್ರ ರಕ್ಷಣೆಕಾರರು ಕೂಡ ಮುಖ್ಯವಾಗಿರುತ್ತದೆ, ಯಾವ ಅವಧಿಯಲ್ಲಿ ಓವರ್ ಅನ್ನು ನಿಧಾನಗೊಳಿಸಲಾಯಿತು, ಅದು ಪ್ರಮುಖ ಸರಣಿಯೇ, ಪಂದ್ಯದ ಅಂತಿಮ ಅಥವಾ ಮೊದಲ ಓವರ್ ಆಗಿತ್ತೆ, ಪಂದ್ಯವನ್ನು ಆಯೋಜಿಸಿದ್ದ ಸಮಯ, ಅಥವಾ ಪಂದ್ಯದ ವೇಳೆ ಏನಾದರೂ ಅಡಚಣೆ ಆಗಿ ಮತ್ತೆ ಪಂದ್ಯ ಆರಂಭಗೊಂಡ ವೇಳೆಯನ್ನು ಕೂಡ ಪರಿಗಣಿಸಲಾಗುವುದ ಎಂದು ಐಸಿಸಿ ಸೂಚಿಸಿದೆ.
ಫೀಲ್ಡಿಂಗ್ ಮಾಡುವ ತಂಡವು ಮೇಲ್ಕಂಡ ಯಾವುದೇ ಸಂದರ್ಭವನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ್ದರೆ, ಪಂದ್ಯ ಮುಗಿಯುವವರೆಗೂ ಆ ತಂಡದ ಒಬ್ಬ ಆಟಗಾರ 30 ಯಾರ್ಡ್‍ನ ಹೊರಗೆ ಪಂದ್ಯ ಮುಗಿಯುವವರೆಗೂ ನಿಲ್ಲಬೇಕಾಗುತ್ತದೆ. ಇಂಗ್ಲೆಂಡ್ ದೇಶವು ಹೊಸದಾಗಿ ಇಸಿಬಿ ಸರಣಿಯಲ್ಲಿ 100 ಎಸೆತಗಳ ಹೊಸ ಪಂದ್ಯಾವಳಿಯನ್ನು ಪರಿಚಯಿ ಸಿರುವುದರಿಂದ ಚುಟುಕು ಕ್ರಿಕೆಟ್ ಅನ್ನು ಮತ್ತಷ್ಟು ಗಮನ ಸೆಳೆಯುವಂತೆ ಮಾಡಲು ಈ ಕ್ರಮವನು ತೆಗೆದು ಕೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ.
ಪಂದ್ಯದ ವೇಳೆ ನೀಡುವ 2 ನಿಮಿಷ 30 ಸೆಕೆಂಡ್‍ಗಳ ಡ್ರಿಂಕ್ಸ್ ಅನ್ನು ಪಂದ್ಯಾವಳಿಯ ಎರಡು ಇನ್ನಿಂಗ್ಸ್‍ನ ನಡುವೆ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಜನವರಿ 16 ರಿಂದ ಜಮೈಕಾದಲ್ಲಿ ವೆಸ್ಟ್‍ಇಂಡೀಸ್ ಹಾಗೂ ಐರ್ಲೆಂಡ್ ವಿರುದ್ಧ ನಡೆಯಲಿರುವ ಚುಟುಕು ಪಂದ್ಯದಿಂದ ಐಸಿಸಿಯ ನೂತನ ನಿಯಮಗಳು ಜಾರಿಗೆ ಬರಲಿವೆ ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜನವರಿ 18 ರಿಂದ ಆರಂಭಗೊಳ್ಳ ಲಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‍ಇಂಡೀಸ್ ಮಹಿಳೆಯ ಸರಣಿಯಿಂದ ಈ ನಿಯಮವನ್ನು ಮಹಿಳಾ ಕ್ರಿಕೆಟ್‍ಗೆ ಅಳವಡಿಸಲಾಗುವುದು.

Articles You Might Like

Share This Article