ಚುಟುಕು ವಿಶ್ವಸಮರಕ್ಕೆ ಮುಹೂರ್ತ ಫಿಕ್ಸ್, ಅ.23ರಂದು ಭಾರತ-ಪಾಕ್ ಬಿಗ್‍ಫೈಟ್

Social Share

– ಜಯಪ್ರಕಾಶ್
ಮೆಲ್ಬೋರ್ನ್, ಜ. 21- ಚುಟುಕು ವಿಶ್ವಕಪ್‍ನ 8ರ ಆವೃತ್ತಿ ಮುಗಿದು ಇನ್ನು 2 ತಿಂಗಳು ಮುಗಿರುವಾಗಲೇ 9ನೇ ಆವೃತ್ತಿಯ ಟ್ವೆಂಟಿ-20 ವಿಶ್ವಸಮರ ದಿನಾಂಕಗಳನ್ನು ಐಸಿಸಿ ಇಂದು ಪ್ರಕಟಿಸಿದೆ.ಅಕ್ಟೋಬರ್ 16 ರಿಂದ ಶ್ರೀಲಂಕಾ ಹಾಗೂ ನಮೀಬಿಯಾ ವಿರುದ್ಧ ನಡೆಯುವ ಪಂದ್ಯದಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡರೆ ಅಕ್ಟೋಬರ್ 22ರಿಂದ ಸಿಡ್ನಿಯಲ್ಲಿ ಸೂಪರ್ 12 ಪಂದ್ಯಗಳು ಆರಂಭಗೊಳ್ಳಲಿದೆ.
ಗುಂಪಿನ ಹಂತದ ಪಂದ್ಯಗಳಲ್ಲಿ ಎರಡು ತಂಡಗಳನ್ನು ವಿಂಗಡಿಸಲಾಗಿದ್ದು ಎ ಗುಂಪಿನಲ್ಲಿ ಶ್ರೀಲಂಕಾ, ನಮೀಬಿಯಾ, ಅರ್ಹತೆ ಪಡೆಯುವ 2 ತಂಡಗಳು ಪಾಲ್ಗೊಂಡರೆ, ಬಿ ಗುಂಪಿನಲ್ಲಿ ವಿಶ್ವ ಚಾಂಪಿಯನ್ ವೆಸ್ಟ್‍ಇಂಡೀಸ್, ಸ್ಕಾಟ್‍ಲ್ಯಾಂಡ್ ಹಾಗೂ ಅರ್ಹತೆ ಪಡೆಯುವ 2 ತಂಡಗಳು ಸೆಣಸಲಿವೆ.
ಅಕ್ಟೋಬರ್ 23 ರಂದು ಸಾಂಪ್ರದಾಯಿಕ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು ಈ ಹೈವೋಲ್ಟೇಜ್ ಪಂದ್ಯದ ಬಗ್ಗೆ ಕ್ರೀಡಾ ಪ್ರೇಮಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ.ವಿಶ್ವಕಪ್ ಇತಿಹಾಸದಲ್ಲೇ ಪಾಕಿಸ್ತಾನ ತಂಡವು ಭಾರತ ವಿರುದ್ಧ ಗೆಲುವು ಕಂಡಿರಲಿಲ್ಲ, ಆದರೆ ಚುಟುಕು ವಿಶ್ವಕಪ್‍ನ 8ನೆ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಪಡೆಯು ಬಾಬರ್ ಅಜಮ್ ಸಾರಥ್ಯದ ಪಾಕ್ ವಿರುದ್ಧ ಸೋಲು ಕಂಡಿರುವುದರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‍ನ ಪಂದ್ಯವು ಸಾಕಷ್ಟು ಕುತೂಹಲ ಮೂಡಿಸಿದೆ.
ನವೆಂಬರ್ 9 ಹಾಗೂ ನವೆಂಬರ್ 10 ರಂದು ಸಿಡ್ನಿ ಹಾಗೂ ಅಡಿಲೇಡ್ ಮೈದಾನಗಳಲ್ಲಿ ಸೆಮಿಫೈನಲ್ ಪಂದ್ಯಗಳು ಜರುಗಿದರೆ, ಮಾರ್ಚ್ 13 ರಂದು ವಿಶ್ವದ ಅತ್ಯಂತ ಎರಡನೇ ಕ್ರಿಕೆಟ್ ಕ್ರೀಡಾಂಗಣ ಎಂಬ ಖ್ಯಾತಿ ಹೊಂದಿರುವ ಮೆಲ್ಬೋರ್ನ್‍ನ ಎಂಸಿಜಿ ಮೈದಾನದಲ್ಲಿ ಫೈನಲ್ ಪಂದ್ಯ ನಡೆದು ಹೊಸ ವಿಶ್ವ ಚಾಂಪಿಯನ್ ಆಗುವ ತಂಡ ಯಾವುದೆಂಬ ಕುತೂಹಲಕ್ಕೆ ತೆರೆ ಬೀಳಲಿದೆ.
# ಚುಟುಕು ಪಂದ್ಯಗಳು ನಡೆಯುವ ಮೈದಾನಗಳು:
ಅಡಿಲೇಡ್, ಬ್ರೆಸ್‍ಬೆನ್, ಗಿಲ್ಯಾಂಗ್, ಹೋಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ.
# ವಿಶ್ವ ಚಾಂಪಿಯನ್‍ಗಳಾಗಲು ಬಲು ಸಹಕಾರಿ :
ಚುಟುಕು ವಿಶ್ವಕಪ್ ನಡೆಯಲು ಇನ್ನು 9 ತಿಂಗಳು ಇರುವಾಗಲೇ ತಂಡಗಳನ್ನು ಘೋಷಣೆ ಮಾಡಿರುವುದರಿಂದ ಮುಂದಿನ ವಿಶ್ವಕಪ್ ಬಲು ರೋಚಕವಾಗಿ ಕೂಡಿರುತ್ತದೆ ಎಂದು ಚುಟುಕು ವಿಶ್ವಕಪ್ ಚಾಂಪಿಯನ್ ನಾಯಕ ಆರೋನ್ ಪಿಂಚ್ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರೂಪ್ ಹಂತದಲ್ಲಿ ಚುಟುಕು ವಿಶ್ವಕಪ್ ಚಾಂಪಿಯನ್ ಆಗಿರುವ ಶ್ರೀಲಂಕಾ ಹಾಗೂ ವೆಸ್ಟ್‍ಇಂಡೀಸ್ ತಂಡಗಳು ಸ್ಥಾನ ಪಡೆದಿರುವುದು ಕೂಡ ಉತ್ತಮ ಬೆಳವಣಿಗೆಯೇ. ಗುಂಪಿನ ಹಂತದಲ್ಲೇ ಪಿಚ್‍ನ ಗತಿಯನ್ನು ಅರಿಯುವ ಮೂಲಕ ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ತೋರಿಸಲು ಅವಕಾಶ ಸಿಕ್ಕಂತಾಗುತ್ತದೆ.
ಚುಟುಕು ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುವ ತಂಡಗಳು ಕೂಡ ಈ ನಡುವೆ ಬಹಳಷ್ಟು ಟ್ವೆಂಟಿ-20 ಪಂದ್ಯಗಳನ್ನಾಡುವುದರಿಂದ ಆ ತಂಡಗಳಿಗೂ ಸಹಕಾರಿಯಾಗಲಿದೆ, ನಮ್ಮ ತಂಡವು ಕೂಡ ಚುಟುಕು ವಿಶ್ವಕಪ್ ವೇಳೆಗೆ ಬಹಳಷ್ಟು ಚುಟುಕು ಪಂದ್ಯಗಳನ್ನಾಡಲಿರುವುದರಿಂದ ಮುಂಬರುವ ವಿಶ್ವಕಪ್‍ನಲ್ಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಚಾಂಪಿಯನ್‍ಗಳಾಗುವ ಅವಕಾಶವು ದೊರೆಯುತ್ತದೆ ಎಂದು ಅವರು ಹೇಳಿದರು.
# ಒಂದೇ ಗುಂಪಿನಲ್ಲಿ ಮೂರು ಮಾದರಿಯ ವಿಶ್ವಕಪ್ ಚಾಂಪಿಯನ್ಸ್ :
ಮೆಲ್ಬೋರ್ನ್, ಜ.21- ವಿಶ್ವಕಪ್ 9ರ ಆವೃತ್ತಿಯ ಎ ಗುಂಪಿನಲ್ಲಿ ಈ ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ (ಏಕದಿನ), ನ್ಯೂಜಿಲ್ಯಾಂಡ್ (ಟೆಸ್ಟ್) ಹಾಗೂ ಆಸ್ಟ್ರೇಲಿಯಾ (ಟ್ವೆಂಟಿ-20) ತಂಡಗಳು ಮುಖಾಮುಖಿಯಾಗಲಿರುವುದು ವಿಶೇಷವಾಗಿದೆ.
14 ನವೆಂಬರ್ 2021 ರಂದು ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಚುಟುಕು ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ವಿಶ್ವಕಪ್ ಗೆದ್ದುಕೊಂಡಿತು.
ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗತ 20 ಓವರ್‍ಗಳಲ್ಲಿ 4 ವಿಕೆಟ್‍ಗಳನ್ನು ಕಳೆದುಕೊಂಡು 172 ರನ್ ಗಳಿಸಿದರೆ, ಆಸ್ಟ್ರೇಲಿಯಾ ಕೇವಲ 2 ವಿಕೆಟ್ ಕಳೆದುಕೊಂಡು 18.5 ಓವರ್‍ಗಳಲ್ಲೇ 173 ರನ್ ಗಳಿಸುವ ಮೂಲಕ ಗೆಲುವು ಸಾಸಿತು.50 ಎಸೆತಗಳಲ್ಲಿ 77 ರನ್ ಗಳಿಸಿದ ಮಿಚಲ್ ಮಾರ್ಷಲ್ ಪಂದ್ಯ ಪುರುಷೋತ್ತಮರಾದರೆ, ಡೇವಿಡ್ ವಾರ್ನರ್ ಸರಣಿ ಪುರುಷೋತ್ತಮರಾದರು.
14 ಜುಲೈ 19 ರಂದು ಲಾಡ್ರ್ಸ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗತ 50 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿದರೆ, ನಂತರ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಕೂಡ 241 ರನ್ ಗಳಿಸಿತು, ನಂತರ ನಡೆದ ಸೂಪರ್ ಓವರ್‍ನಲ್ಲೂ ಎರಡು ತಂಡಗಳು 15 ರನ್ ಗಳಿಸಿದ್ದರಿಂದ ಬೌಂಡರಿ ಹಾಗೂ ಸಿಕ್ಸರ್‍ಗಳ ಆಧಾರದ ಮೇಲೆ ಇಂಗ್ಲೆಂಡ್ ಅನ್ನು ವಿಶ್ವ ಚಾಂಪಿಯನ್ ಆಗಿ ಘೋಷಿಸಲಾಯಿತು.
ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್‍ನಲ್ಲಿ ಜೂನ್ 18 ರಿಂದ 23, 2021ರವರೆಗೂ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 217 ಹಾಗೂ ದ್ವಿತೀಯ ಇನ್ನಿಂಗ್ಸ್‍ನಲ್ಲಿ 170 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ ಪ್ರಥಮ ಇನ್ನಿಂಗ್ಸ್‍ನಲ್ಲಿ 249 ಹಾಗೂ ಎರಡನೇ ಇನ್ನಿಂಗ್ಸ್‍ನಲ್ಲಿ 2 ವಿಕೆಟ್ ಕಳೆದುಕೊಂಡು 140 ರನ್ ಗಳಿಸುವ ಮೂಲಕ ಗೆಲುವು ಸಾಸುವ ಮೂಲಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ತಂಡವಾಗಿ ನ್ಯೂಜಿಲ್ಯಾಂಡ್ ಹೊರಹೊಮ್ಮಿತು.
ವಿಶೇಷವೆಂದರೆ ನ್ಯೂಜಿಲ್ಯಾಂಡ್ ತಂಡವು ಏಕದಿನ ಹಾಗೂ ಚುಟುಕು ವಿಶ್ವಕಪ್‍ನಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರೆ, ವಿಶ್ವ ಟೆಸ್ಟ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Articles You Might Like

Share This Article