ಕಳೆದ 8 ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಹರಿದುಬಂದ ಕಾಣಿಕೆ ಎಷ್ಟು ಗೊತ್ತೇ..?

ಹೈದರಾಬಾದ್, ಡಿ.25- ತಿರುಪತಿ ತಿಮ್ಮಪ್ಪನ ಹುಂಡಿಗೆ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 1033 ಕೋಟಿ ರೂ. ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಕೊರೊನಾ ತೆರವಿನ ನಂತರ ಇದು ಅತ್ಯಂತ ದೊಡ್ಡ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ ಎಂದು ಟಿಟಿಡಿ ಹೇಳಿದೆ.ಕಳೆದ ಏಪ್ರಿಲ್ ನಂತರ ಪ್ರತಿದಿನ ತಿಮ್ಮಪ್ಪನ ಹುಂಡಿಗೆ ಸರಾಸರಿ 4 ಕೋಟಿ ರೂ. ಕಾಣಿಕೆ ಸಂಗ್ರಹವಾಗುತ್ತಿದೆ. 2022ರ ಮಾರ್ಚ್ ನಂತರ ತಿರುಪತಿಗೆ ಭಕ್ತರು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಜೈಪುರ ಅರಣ್ಯದಲ್ಲಿ ಚಿರತೆಗಳ […]