1 ಕೋಟಿ ಖೋಟಾ ನೋಟು ನೀಡಿ ವಂಚಿಸಿದ್ದ ಮೂವರ ಬಂಧನ

ಬೆಂಗಳೂರು,ಡಿ.25- ಸಂಕಷ್ಟಕ್ಕೆ ಸಿಲುಕಿದ್ದ ಗುತ್ತಿಗೆದಾರರೊಬ್ಬರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಒಂದು ಕೋಟಿ ಖೋಟಾ ನೋಟುಗಳನ್ನು ನೀಡಿ ವಂಚಿಸಿದ್ದ ಖತರ್ನಾಕ್ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರ್‍ಟಿನಗರ, ದಿಣ್ಣೂರು ಮುಖ್ಯರಸ್ತೆ, ವಿಕೇರ್ ಆಸ್ಪತ್ರೆ ಬಳಿಯ ನಿವಾಸಿ ಮನ್ನಾಶರಣ(35), ವಿಷ್ಣು ರಾಜನ್.ಆರ್ ಅಲಿಯಾಸ್ ವಿಷ್ಣು (26) ಹಾಗೂ ರಾಮಮೂರ್ತಿನಗರ ಮಂಜುನಾಥನಗರದ 8ನೇ ಕ್ರಾಸ್‍ನ ನಿವಾಸಿ ಪ್ರವೀಣ್‍ಕುಮಾರ್(40) ಎಂಬುವರನ್ನು ಬಂಧಿಸಿದ್ದು ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಜಯನಗರ 4ನೇ ಟಿಬ್ಲಾಕ್‍ನ 34ನೇ ಕ್ರಾಸ್‍ನಲ್ಲಿರುವ ಜೆಎನ್ ಪ್ರಾಜೆಕ್ಟ್‍ನ ಪಾಲುದಾರರಾಗಿದ್ದ ಪಾರ್ಥಸಾರಥಿ.ಎನ್ ಅವರು […]