ಪಾಕ್ ಭದ್ರತಾ ಶಿಬಿರಗಳಲ್ಲಿ ಶೂಟೌಟ್ : ನಾಲ್ವರು ಉಗ್ರರು, ಓರ್ವ ಯೋಧ ಬಲಿ

ಕರಾಚಿ, ಫೆ.3- ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಪಾಕಿಸ್ತಾನದ ಗಲಭೆಗ್ರಸ್ತ ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದ ಭದ್ರತಾ ಪಡೆಗಳ ಎರಡು ಶಿಬಿರಗಳ ಮೇಲೆ ದಾಳಿ ನಡೆಸಿದಾಗ ಉಂಟಾದ ಗುಂಡಿನ ಚಕಮಕಿಯಲ್ಲಿ ನಾಲ್ವರು ಭಯೋತ್ಪಾದಕರು ಮತ್ತು ಓರ್ವ ಯೋಧ ಮೃತಪಟ್ಟಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ. ಬಳಿಕ ನಿಷೇಧಿತ ಬಲೂಚ್ ಲಿಬರೇಷನ್ ಆರ್ಮಿ ಈ ದಾಳಿಯ ಹೊಣೆ ಹೊತ್ತಿದೆ. ಪಂಜ್‍ಗೂರ್ ಮತ್ತು ನೋಶ್ಕಿ ಜಿಲ್ಲೆಗಳಲ್ಲಿ ದಾಳಿ ನಡೆಯಿತು. ಪಂಜ್‍ಗೂರ್‍ನಲ್ಲಿ ಉಗ್ರಗಾಮಿಗಳು ಭದ್ರತಾ ಪಡೆಗಳ ಶಿಬಿರವೊಂದಕ್ಕೆ ಎರಡು ಕಡೆಗಳಿಂದ ನುಗ್ಗಲು ಪ್ರಯತ್ನಿಸಿದರು. […]