ಟೆಂಪೋ ಕಮರಿಗೆ ಉರುಳಿ ಬಿದ್ದು 7 ಪ್ರವಾಸಿಗರ ಸಾವು

ಶಿಮ್ಲಾ, ಸೆ.26 – ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದ ಪರಿಣಾಮ ಏಳು ಮಂದಿ ಸಾವನ್ನಪ್ಪಿ, 10 ಮಂದಿ ಗಾಯ ಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆ ಯಲ್ಲಿ ನಡೆದಿದೆ. ಮೃತಪಟ್ಟವರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದವರಾಗಿದ್ದಾರೆ. ಬಂಜಾರ್ ಉಪವಿಭಾಗದ ಘಿಘಿ ಬಳಿ ಸ್ಥಳೀಯರು ಅಪಘಾತ ನೋಡಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಕತ್ತಲಾಗಿದ್ದ ಕಾರಣ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾದರೂ ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಮೊದಲು ಬಂಜಾರ್ ಆಸ್ಪತ್ರೆಗೆ […]