BIG NEWS: ಮಹಾರಾಷ್ಟ್ರದ 10 ಸಚಿವರು, 20 ಶಾಸಕರಿಗೆ ಕೊರೊನಾ ಸೋಂಕು

ನವದೆಹಲಿ, ಜ.1- ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮೂರನೇ ಅಲೆ ಖಚಿತಗೊಳ್ಳುವ ಮೂನ್ಸೂಚನೆ ಸಿಕ್ಕಿದ್ದು, ಜನಸಾಮಾನ್ಯರನ್ನಷ್ಟೆ ಅಲ್ಲ ಶಾಸಕರು, ಸಚಿವರನ್ನೂ ಕೊರೊನಾ ಕಾಡಲಾರಂಭಿಸಿದೆ. ಮಹಾರಾಷ್ಟ್ರದಲ್ಲಿ 10 ಮಂದಿ ಸಚಿವರು ಹಾಗೂ ಇಬ್ಬತ್ತು ಶಾಸಕರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಹಲವು ಮುನ್ನೆಚ್ಚರಿಕೆಗಳ ಹೊರತಾಗಿಯೂ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಮತ್ತು ಓಮಿಕ್ರಾನ್ ಸೋಂಕಿತರ ಸಂಖ್ಯೆ ತೀವ್ರವಾಗಿದೆ. ಸರ್ಕಾರದ ನಿರಂತರ ಮನವಿಗಳ ಹೊರತಾಗಿಯೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ […]