ಸೋಮಾಲಿಯಾ : ಕಾರ್ ಬಾಂಬ್‍ ಸ್ಪೋಟಕ್ಕೆ 100ಕ್ಕೂ ಹೆಚ್ಚು ಮಂದಿ ಬಲಿ

ಮೊಗಾಡಿಶು,ಅ.30-ಜನನಿಬಿಡ ಪ್ರದೇಶದಲ್ಲಿ ಎರಡು ಕಾರ್ ಬಾಂಬ್‍ಗಳು ಸ್ಪೋಟಿಸಿದ್ದರಿಂದ ಕನಿಷ್ಟ 100ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿರುವ ಘಟನೆ ವರದಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.ಸೋಮಾಲಿಯದ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಹೇಳಿಕೆ ನೀಡಿದ್ದು, ಘಟನೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಷಾದಿಸಿದ್ದಾರೆ. ಅಲ್ ಖೈದಾ ಸಂಪರ್ಕಿತ ಶಹಭಾದ್ ತೀವ್ರವಾದಿ ಗುಂಪು ಈ ಘಟನೆ ನಡೆಸಿರುವ ಸಾಧ್ಯತೆ ಇದೆ ಎಂದು ಸೋಮಾಲಿಯ ಸರ್ಕಾರ ದೂರಿದೆ. ಆದರೆ ಆರೋಪಿತ ಗುಂಪು ಯಾವುದೇ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ. ಸೊಮಾಲಿಯ ರಾಜಧಾನಿಯ […]