100 ವರ್ಷ ಪೂರೈಸಿದ ಬೆಳ್ಳಜ್ಜಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಅರ್ಥಪೂರ್ಣ ಅಭಿನಂದನೆ
ಚಿಕ್ಕಮಗಳೂರು, ಆ.10- ನೂರು ವರ್ಷಗಳ ಗಡಿದಾಟಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಂಪೇಕೊಳಲು ಗ್ರಾಮದ ಬೆಳ್ಳಜ್ಜಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರ ಬದುಕಿನ ಬೆಳ್ಳಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.ಸ್ವಾತಂತ್ರ್ಯ ಪೂರ್ವದಲ್ಲಿ ವಿವಾಹವಾಗಿ ಇಂದಿಗೂ ಬದುಕು ಸಾಗಿಸುತ್ತಿರುವ ನೂರು ದಾಟಿದ ಬೆಳ್ಳಿಯಜ್ಜಿ. ಊರಿನ ಮಾದಾರ ಮಾಸ್ತಿಯವರ ಪತ್ನಿ. ಇವರ ಗಂಡ ಮಾದಾರ ಮಾಸ್ತಿ ತೀರಿಕೊಂಡು ಹಲವು ವರ್ಷಗಳೇ ಕಳೆದಿವೆ. ಸುತ್ತ 10 ಹಳ್ಳಿಯ ಮಾದಾರನಾದ ಮಾಸ್ತಿ ಬಹಳ ಗಟ್ಟಿಗ ಅವನೊಬ್ಬನೇ ದಿನಕ್ಕೆ ನಾಲ್ಕಾಳುಗಳ ಕೆಲಸ ಮಾಡುತ್ತಿದ್ದ ಎಂಬುದನ್ನು ಊರಿನವರೆಲ್ಲ […]