ಭಾರತಕ್ಕೆ ಮತ್ತೆ ಸೌತ್ ಆಫ್ರಿಕಾದ 100 ಚೀತಾಗಳು

ಜೋಹಾನ್ಸ್‍ಬರ್ಗ್, ಜ.27- ನಮೀಬಿಯಾದಿಂದ ಎಂಟು ಚೀತಾಗಳು ಭಾರತದ ಕಾಡಿಗೆ ಬಂದ ಕೆಲ ತಿಂಗಳ ಬೆನ್ನಲ್ಲೇ ಇನ್ನೂ ನೂರು ಚಿರತೆಗಳನ್ನು ಭಾರತಕ್ಕೆ ಕಳುಹಿಸಲು ದಕ್ಷಿಣ ಆಫ್ರಿಕಾ ಒಪ್ಪಂದ ಮಾಡಿಕೊಂಡಿದೆ.ಅದರ ಪ್ರಕಾರ, ಮುಂದಿನ ತಿಂಗಳು 12 ಚೀತಾಗಳನ್ನು ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಸೌತ್ ಆಫ್ರಿಕಾದ ಪರಿಸರ ಮಂತ್ರಾಲಯ ಹೇಳಿದೆ. ಒಟ್ಟು ನೂರು ಚೀತಾಗಳನ್ನು ಸೌತ್ ಆಫ್ರಿಕಾದಿಂದ ಭಾರತಕ್ಕೆ ಏಳೆಂಟು ಹಂತಗಳಲ್ಲಿ ಕರೆತರಲು ಯೋಜನೆ ರೂಪಿಸಲಾಗಿದೆ. ಚೀತಾಗಳು ಹೊಂದಿಕೊಳ್ಳುವ ಪರಿಸರವನ್ನು ಸೃಷ್ಟಿಸಬೇಕಾಗಿದ್ದರಿಂದ ಹಂತ ಹಂತವಾಗಿ ಭಾರತಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಚಿರತೆ […]