ದೆಹಲಿಯಲ್ಲಿ ಕಳೆದ 19 ದಿನದಲ್ಲಿ 106 ಮಂದಿ ಚಳಿಗೆ ಬಲಿ..!

ನವದೆಹಲಿ, ಜ.29- ಕೊರೆಯುವ ಚಳಿಯಿಂದಾಗಿ ದೆಹಲಿಯಲ್ಲಿ ಜನವರಿ 1 ರೀಂದ 19ರ ನಡುವೆ ಕನಿಷ್ಠಪಕ್ಷ 106 ಮಂದಿ ವಸತಿ ರಹಿತರು ಮೃತಪಟ್ಟಿದ್ದಾರೆ ಎಂದು ಸ್ವಯಂಸೇವಾ ಸಂಸ್ಥೆಯೊಂದು ಪ್ರತಿಪಾದಿಸಿದೆ. ಅಕೃತ ಅಂಕಿ-ಅಂಶವನ್ನು ಉದಾಹರಿಸಿರುವ ಸ್ವಯಂಸೇವಾ ಸಂಸ್ಥೆ ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್‍ಮೆಂಟ್ (ಸಿಎಚ್‍ಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು, ಚಳಿಗಾಲದಲ್ಲಿ ವಸತಿರಹಿತರಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದೆ.