ಬೆಂಗಳೂರಲ್ಲಿ ನಕಲಿ ಛಾಪಾಕಾಗದ ಜಾಲ ಪತ್ತೆ, 11 ಮಂದಿ ಬಂಧನ

ಬೆಂಗಳೂರು,ಆ.5- ಸರ್ಕಾರ ನಿಷೇಧಿಸಿರುವ ಛಾಪಾ ಕಾಗದಗಳನ್ನು ನಕಲಿ ಮಾಡಿ ಮುದ್ರಿಸಿ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 5.11 ಲಕ್ಷ ರೂ. ಮೌಲ್ಯದ ವಿವಿಧ ಮುಖ ಬೆಲೆಯ 2664 ನಕಲಿ ಸ್ಟಾಂಪ್ ಪೇಪರ್‍ಗಳು, ನಕಲಿ ಸೀಲ್‍ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ವೆಂಕಟೇಶ್, ವಿಶ್ವನಾಥ್, ಕಾರ್ತಿಕ್, ಶ್ಯಾಮರಾಜು, ಶಶಿಧರ್, ಕರಿಯಪ್ಪ, ರವಿಶಂಕರ್, ಶಿವಶಂಕರಪ್ಪ, ಗುಣಶೇಖರ್, ರಾಘವ ಎನ್.ಕಿಶೋರ್ ಬಂಧಿತ ಆರೋಪಿಗಳು. ಈ ವಂಚಕರು ಒಂದು ಹಳೆಯ ಸ್ಟಾಂಪ್ ಪೇಪರ್‍ನ್ನು 5 ಸಾವಿರದಿಂದ […]