ಸೈಬರ್ ಅಪರಾಧ ತಡೆಗೆ ಮತ್ತಷ್ಟು ಕಠಿಣ ಕ್ರಮ ಅಗತ್ಯ

ನವದೆಹಲಿ,ಫೆ.11- ಸಾಂಪ್ರದಾಯಿಕ ಪೊಲೀಸ್ ನೇಮಕಾತಿಗಳ ಜೊತೆಯಲ್ಲಿ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಪರಿಣಿತ ತಜ್ಞರನ್ನು ನೇಮಿಸಬೇಕು ಎಂದು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿದೆ. ಸಂಸದ ಆನಂದ್ ಶರ್ಮ ಅವರ ನೇತೃತ್ವದ ಸಮಿತಿ ಪೊಲೀಸ್ ತರಬೇತಿ, ಆಧುನೀಕರಣ ಮತ್ತು ಸುಧಾರಣೆಗಳ ಕುರಿತು ವರದಿಯನ್ನು ನೀಡಿದೆ. ರಾಜ್ಯಗಳು ಸೈಬರ್ ಅಪರಾಧಗಳ ಹಾಟ್‍ಸ್ಪಾಟ್‍ಗಳಾಗುತ್ತಿವೆ. ಮೊದಲು ಇದನ್ನು ಗುರುತಿಸಬೇಕು. ಅಪರಾಧಗಳ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಂಜಾಬ್, ರಾಜಸ್ಥಾನ, ಅಸ್ಸಾಂನಂತಹ ರಾಜ್ಯಗಳಲ್ಲಿ ಸೈಬರ್ ಅಪರಾಧ ತನಿಖೆಗೆ ಒಂದೇ ಪೊಲೀಸ್ ಠಾಣೆ ಇದೆ. […]