ಮಾಲ್ಡೀವ್ಸ್‌ನಲ್ಲಿ ಅಗ್ನಿ ಅನಾಹುತ, 9 ಭಾರತೀಯರ ಸಾವು

ಮಾಲೆ,ನ.10- ಮಾಲ್ಡೀವ್ಸ್‍ನ ರಾಜಧಾನಿ ಮಾಲೆಯಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ 9 ಭಾರತೀಯರು ಸೇರಿ 11 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ನಗರದ ಹೃದಯ ಭಾಗದ ಕ್ರೀಡಾಂಗಣದ ಬಳಿ ಇರುವ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಕಟ್ಟಡದ ಮೇಲಿನ ಮಹಡಿಯಲ್ಲಿ ಈವರೆಗೂ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಮನೆ ಕೆಲಸದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಕಟ್ಟಡದ ನೆಲಮಹಡಿಯಲ್ಲಿರುವ ವಾಹನಗಳ ದುರಸ್ತಿ ಗ್ಯಾರೇಜ್‍ನಿಂದ ಬೆಂಕಿ ಕಾಣಿಸಿಕೊಂಡು ನಾಲ್ಕು ಮಹಡಿಯ ಕಟ್ಟಡವನ್ನು ಬೆಂಕಿ ಕೆನ್ನಾಲಿಗೆ ಸಂಪೂರ್ಣ ಆವರಿಸಿದೆ. […]