ಮಾಂಗಲ್ಯ ಸರ ದೋಚಿದ್ದ ಇಬ್ಬರ ಬಂಧನ

ಬೆಂಗಳೂರು,ಜ.20- ಮಹಿಳೆಗೆ ಬೆದರಿಕೆ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ದರೋಡೆಕೋರರನ್ನು ಹನುಮಂತ ನಗರ ಠಾಣೆ ಪೊಲೀಸರು 500ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸಿ ಬಂಧಿಸಿ 27 ಗ್ರಾಂ ಚಿನ್ನದ ಸರ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪಂತರಪಾಳ್ಯ, ಅಂಬೇಡ್ಕರ್‍ನಗರದ ನಿವಾಸಿ ಸುನೀಲ್‍ಕುಮಾರ್(37), ವಿನಾಯಕ ಲೇಔಟ್‍ನ ಶ್ರೀನಿವಾಸ (25) ಬಂಧಿತ ಆರೋಪಿಗಳು. ಹನುಮಂತನಗರದ 2ನೇ ಬ್ಲಾಕ್, 1ನೇ ಹಂತದ 5ನೇ ಕ್ರಾಸ್ ನಿವಾಸಿ ಜಯಶ್ರೀ(56) ಎಂಬುವರು ಅಶೋಕನಗರದಲ್ಲಿರುವ ಜಿ.ಟಿ.ಎಲ್‍ಪಿಎಸ್ […]