ವಿಮಾನದಲ್ಲಿ ದೋಷ, 13 ಗಂಟೆ ನಿಲ್ದಾಣದಲ್ಲೇ ಕಾಲ ಕಳೆದ 170 ಪ್ರಯಾಣಿಕರು

ಮುಂಬೈ,ಫೆ.10- ನಿನ್ನೆ ಮದ್ಯಾಹ್ನ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನದ ತಾಂತ್ರಿಕ ದೋಷದಿಂದ ಇಂದು ಬೆಳಿಗ್ಗೆ 4 ಗಂಟೆಗೆ ಹೊರಟ್ಟಿದ್ದರಿಂದ 170 ಪ್ರಯಾಣಿಕರು 13 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಗಿತ್ತು. ಮುಂಬೈ ವಿಮಾನ ನಿಲ್ದಾಣದಿಂದ ನಿನ್ನೆ ಮದ್ಯಾಹ್ನ 3 ಗಂಟೆಗೆ ದುಬೈಗೆ ಟೇಕಾಫ್ ಆಗಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಇಂತಹ ಘಟನೆ ನಡೆದಿದೆ. ವಿಮಾನ ಹಾರಾಟ ವಿಳಂಬದಿಂದ 170 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು. ಲಾಂಜ್ ಸೌಲಭ್ಯ ಸೇರಿದಂತೆ ವಿಶೇಷ […]