ವಿದೇಶಗಳಿಂದ ಬೆಂಗಳೂರಿಗೆ ಬಂದ 13 ಪ್ರಯಾಣಿಕರಿಗೆ ಕೋವಿಡ್

ಬೆಂಗಳೂರು, ಜ.19-ವಿವಿಧ ದೇಶಗಳಿಂದ ವಿಮಾನಗಳ ಮೂಲಕ ನಗರಕ್ಕೆ ಆಗಮಿಸಿದ 13 ಪ್ರಯಾಣಿಕರಲ್ಲಿ ಇಂದು ಕೋವಿಡ್ ಸೋಂಕು ದೃಢಪಟ್ಟಿದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿವಿಧ ದೇಶಗಳಿಂದ ವಿಮಾನ ಮೂಲಕ ಬಂದ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿದಾಗ 13 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅಕೃತ ಮೂಲಗಳು ತಿಳಿಸಿವೆ. ಲಂಡನ್ ನ 7, ಯುಎಸ್ 3, ಜರ್ಮನಿ , ಸ್ಪೇನ್, ಫ್ರಾನ್ಸ್ ನಿಂದ ಆಗಮಿಸಿದ ತಲಾ ಒಬ್ಬ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.ಸೋಂಕಿತರಿಗೆ ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದೆ. […]