ಮಸಣವಾಯ್ತು ಮದುವೆ ಮನೆ, ಬಾವಿಗೆ ಬಿದ್ದು 13 ಮಹಿಳೆಯರ ಸಾವು..!

ಕುಶಿನಗರ,ಫೆ.17- ಮದುವೆ ಆಚರಣೆ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಹದಿಮೂರು ಮಹಿಳೆಯರು ಮತ್ತು ಬಾಲಕಿಯರು ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಸಂಭವಿಸಿದೆ.  ಘಟನೆ ನೌರಂಗಿಯಾ ಟೋಲಾ ಗ್ರಾಮದಲ್ಲಿ ಜರುಗಿದ್ದು, ಈ ಮಹಿಳೆಯರು ಮತ್ತು ಮಕ್ಕಳು ಕುಳಿತಿದ್ದ ಕಬ್ಬಿಣದ ಗ್ರಿಲ್ ಏಕಾಏಕಿ ಮುರಿದು ಬಾವಿಗೆ ಬಿದ್ದ ಕಾರಣ ಈ ದುರಂತ ಘಟಿಸಿದೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ನಿನ್ನೆ ರಾತ್ರಿ ವಿವಾಹ-ಪೂರ್ವ ಆಚರಣೆಯಾದ ಹಳದಿ ಶಾಸ್ತ್ರ ನಡೆಯುತ್ತಿತ್ತು. ಕೆಲವು ಮಹಿಳೆಯರು ಮತ್ತು […]