135 ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರಿ ಕಟ್ಟಡಗಳು

ಬೆಂಗಳೂರು,ಫೆ.3- ಸಾಮಾನ್ಯ ಜನರು ಒಂದು ತಿಂಗಳು ನೀರಿನ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುವ ಜಲ ಮಂಡಳಿ ಅಧಿಕಾರಿಗಳು ಕೋಟಿ ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳ ತಂಟೆಗೆ ಮಾತ್ರ ಹೋಗದಿರುವುದು ವಿಪರ್ಯಾಸವಾಗಿದೆ. ಕೇಂದ್ರ, ರಾಜ್ಯ ಸರ್ಕಾರ, ಬಿಬಿಎಂಪಿ, ರೈಲ್ವೆ ಹಾಗೂ ರಕ್ಷಣಾ ಇಲಾಖೆಯವರು ಇದುವರೆಗೂ ಕೋಟ್ಯಂತರ ರೂ. ನೀರಿನ ಬಿಲ್ ಪಾವತಿಸಿಲ್ಲ.ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳಿಗೆ ಕೇವಲ ನೋಟೀಸ್ ಜಾರಿ ಮಾಡಿ ಜಲಮಂಡಳಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಟೀಕೆಗೆ […]