ಲೋಕ್ ಅದಾಲತ್ ನಲ್ಲಿ ಒಂದಾದ ವಿಚ್ಛೇದನಕ್ಕೆ ಮುಂದಾಗಿದ್ದ 14 ದಂಪತಿಗಳು

ತುಮಕೂರು,ಫೆ.12- ಸಣ್ಣ ಪುಟ್ಟ ವಿಚಾರಗಳಿಂದ ಬೇಸರಗೊಂಡು ವಿಚ್ಛೇದನಕ್ಕೆ ಮುಂದಾಗಿದ್ದ ದಂಪತಿಗಳನ್ನು ಲೋಕ ಅದಾಲತ್ ಒಂದುಗೂಡಿಸಿತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ ಇಂದು ನಡೆದ ಲೋಕ್ ಅದಾಲತ್‍ನಲ್ಲಿ ತುಮಕೂರು ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪಾವಗಡ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳಲ್ಲಿ ನ್ಯಾಯಾೀಧಿಶರು ದಂಪತಿಗಳಿಗೆ ಬುದ್ಧಿ ಹೇಳಿ, ಮನವೊಲಿಸಿದ ಪರಿಣಾಮವಾಗಿ 14 ಜೋಡಿಗಳು ಮತ್ತೆ ಒಂದುಗೂಡಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಹಾರ ಬದಲಿಸಿ 7 ದಂಪತಿಗಳನ್ನು ಒಂದು ಮಾಡಿ ಮಾತನಾಡಿದ […]